ನನ್ನ ಈ ನಾಡಿನಲ್ಲಿ ಭವ್ಯ ನಾಮ ಬೀಡಿನಲ್ಲಿ ಬೇಗೆಯೇ ಬೆಟ್ಟವಾಗಿ ಉತ್ತರಕ್ಕೆ ಕಾವಲು. ಬೆವರೆಲ್ಲ ನದಿಗಳಾಗಿ ಮೂರು ದಿಕ್ಕು ಕಡಲು. ಅತ್ತ ಬೆಟ್ಟ ಇತ್ತ ನೀರು ನಡುವೆ ನಗಲು ಎದ್ದವು- ಮೂಳೆಗಳೇ ಮರಗಳಾಗಿ ಆಸೆ...
ಕತ್ತಲೆಲ್ಲ ಬೆತ್ತಲಾಗಿ ಬೆತ್ತಲೆಲ್ಲ ಬೆಳಗಾಗಿ ಕೆಂಪಾಗಲಿ ಕಪ್ಪು ನೆಲ. ಛಿದ್ರ ಛಿದ್ರವಾಗಲಿ ಬೇರು ಬೂದಿಯಾಗಲಿ ತುಳಿದು ನಗುವ ಜಾಲ. ಗುಡಿಸಲಿನ ಗರಿಗಳಿಂದ ಮನೆ ಮನೆಯ ಮನಸಿನಿಂದ ಹಾದಿ ಹೂಲದ ಎದೆಗಳಿಂದ ಹುಟ್ಟಿ ಬರಲಿ ಇಲ್ಲಿ...
ಹೊರಗೆ ಹತ್ತಿತು ಬೆಂಕಿ ಒಳಗೆ ತುಂಬಿತು ಹೂಗೆ ಒಳಗು-ಹೊರಗು ಬೇರಾಯಿತು ಹೇಗೆ? ಹೊರಗಡೆ ತೋಡುವ ವೈರದ-ಪಾಯಕೆ ಬೆಳೆಯಿತು ಒಳಗಡೆ ಉದ್ದನೆ ಗೋಡೆ! ಭೂಪಟ ಗೆರೆಗಳು ಭೂಮಿಗೇ ಅಲ್ಲ ಗರಗಸವಾಗಿವೆ ಮನಸಿನಲಿ ಜಾಲದ ಜಾತಿ ಸೀಳಿದ...
ಸಿಡಿದು ಹೋಗಲಿ ತಾರೆ ನೆಗೆದು ಬೀಳಲಿ ಚಂದ್ರ ಹೂತು ಹೋಗಲಿ ಹಗಲು ಬಂದೀತು ನಮಗೆ ಹೊಸ ಹೊತ್ತು. ಕಗ್ಗತ್ತಲ ಕೋಟೆಯಲ್ಲಿ ಹೊಸ ಆಸೆಯ ಹುಟ್ಟು. ಕತ್ತು ಮುರಿಯುವ ಕತ್ತಲಿಗೆ ಇಟ್ಟೇವು ಭಗ್ಗೆನ್ನುವ ಬೆಂಕಿ ಬೆಂದು...
ಬಡವರಾದೆವು ನಾವು ಬಂಧುಗಳು ಯಾರುಂಟು? ನಾವು ಬಸಿದಾ ಬೆವರು ಯಾರ ಹೊಟೇಲುಂಟು ? ಕಣ್ಣ ಹನಿ ಹರಿಸಿದೆವು ಮಗುವಂತೆ ಬೆಳಸಿದೆವು ಕಂಡೋರ ಮನೆಗೆಲ್ಲ ಕೊಟ್ಟು ಬಂದೆವಲ್ಲ ತಲೆ ಮ್ಯಾಲೆ ಸಾಲ ಹೊತ್ತು ತಂದೆವಲ್ಲ. ಮೂಳೆ...
೧ ಕೋಳಿ ಕೂಗೋದು ಕಾದು ಬಾಳ ತಂಗಳು ತಿಂದು ಹೊತ್ತಿನ ಜತ್ಯಾಗೆ ಹೊಲದಾಕೆ ಬಂದು ಬಿತ್ತಿದ್ದು ಒಣ ನವಣೆ ಬೆಳೆದದ್ದು ಬರೀ ಬವಣೆ. ೨ ಹಾರಕ ತಂದು ನೆಲತುಂಬ ಹೊಯ್ದರೂ ಸುರಕೊಂಡಿದ್ದು ಮಾತ್ರ ಹತ್ತಾರು...
೧ ಭೂಮಿ ಬಿರುಕು ಬಿಟ್ಟಿತು ನಾಡಿನ ನರಗುಂದದಲ್ಲಿ ನಾಡಿ ಮಿಡಿತ ಕೇಳಿ ಹೂತು ಹೋದ ಹೆಣಗಳೆಲ್ಲ ಬರಡು ನೆಲದ ಕಣಗಳೆಲ್ಲ ಪುಟಪುಟಿದು ಸೆಟೆದವು, ಬೀಸಿ ಜೀವಗಾಳಿ. ನೆಲದೊಳಗೆ ಭೋರ್ಗರೆತ, ಸುಳಿಸುತ್ತುವ ಸೆಳೆತ ಸಿಟ್ಟಿನ ಸುಳಿ...
ಹೊಟ್ಟೆಗಂತೂ ಕೂಳು ಇಲ್ಲ ಬಟ್ಟೆಯಂತೂ ಸಿಕ್ಕಲಿಲ್ಲ ಬಾಳಿಗಂತೂ ಬಾಯಿಯಿಲ್ಲ ನಮ್ಮ ನೋವು ಮೀಟಲಿಲ್ಲ. ನಮ್ಮ ಜೀವ ನಮಗೆ ಬಿಡಿ ಬದುಕಲಿಷ್ಟು ಕಾಲ ಕೊಡಿ. ಮುಖದ ತುಂಬ ಜೇಡ ಬಲೆ ನಡೆವ ಬೀದಿ ನಮ್ಮ ನೆಲೆ...