ಅಮವಾಸ್ಯೆಯ ಕಾಳರಾತ್ರಿಯಲ್ಲಿ ಗುಲ್ಲೊ ಗುಲ್ಲು
ಎಲ್ಲಿ, ಎಲ್ಲಿ, ನಮ್ಮ ಚಂದಿರನೆಲ್ಲಿ,
ಯಾರೋ ದುರಾತ್ಮರು ಅವನನ್ನು ಕಿಡ್ನ್ಯಾಪ್ ಮಾಡಿ
ಹೊತ್ತುಕೊಂಡು ಹೋದವರು ಮಾರನೇ ದಿನ ಸಂಜೆ ಅವನನ್ನು
ಎಸೆದು ಹೋಗಿದ್ದು ಎಲ್ಲೋ
ಆಕಾಶದಂಚಿನಲ್ಲಿ,
ಪಾಪ ಗೆರೆಯಂತಾಗಿಬಿಟ್ಟಿದ್ದ ಅವನನ್ನು ಚಂದ್ರನೆಂದು
ಗುರುತಿಸುವುದೇ ಕಷ್ಟವಾಯಿತು
ಮತ್ತೆ ಆರೋಗ್ಯ ಸುಧಾರಿಸಿ ಅವನು ನಿಧಾನಕ್ಕೆ ಗುಂಡಗಾಗಲು
ಹದಿನೈದು ದಿವಸ ಬೇಕಾಯಿತು.
*****