ಕುಟೀರವಾಸದ
ಮುಕುಟಪತಿಗೆದುರು,
ಪ್ರಖ್ಯಾತ ಮೂರುತಿಯ;
ಭದ್ರಪೀಠದ ಮುಂದು,
ಕಾಂತಿ ಹೊಳೆಸಿತು-
ದೀಪಮಾಲೆ!
ಕಲ್ಪ ಸಾಗರ
ಮುಗಿಲಮಂಟಪಕೆ,
ಯೋಜಯೋಜನ;
ಗಗನವಿಸ್ತರಕೆ,
ಎರೆಚಿತಾಕಾಂತಿ-
ದೀಪಮಾಲೆ!
ಭಾವಪ್ರಭೆ
ಮನದೊಳಗೆ ಸುಳಿದು,
ಮೂರುತಿಯ ಪ್ರತಿರೂಪ;
ಬಕುತರಲಿ ಮೆರೆದು,
ಕ್ರೀಡಿಸಿತು ಪ್ರಭೆ-
ದೀಪಮಾಲೆ!
ಬೃಂದವನ ಗೋಪಾಲ
ಧೇನುವಿನ ಎಡೆಗೆ,
ಕ್ಷೀರಸಾಗರಲೋಲ;
ವೇಣುವಿನ ಎಡೆಗೆ,
ರಾಜಿಸಿತು ಕಾಂತಿ-
ದೀಪಮಾಲೆ!
ಸಿರಿಹೂವು ಫಲಪುಷ್ಪ
ಪೀಠದೆದರು,
ಲಾವಣ್ಯ ಯುವತಿ;
ರಜನಿ ಮುಂದು,
ಮಿನಿಗಿತು ಮಣಿ-
ದೀಪಮಾಲೆ!
*****









