Home / ಲೇಖನ / ಇತರೆ / ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ಶುಕ್ರವಾರ, ಅಗಸ್ಟ ೨೧, ೧೯೪೨

ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ಶುಕ್ರವಾರ, ಅಗಸ್ಟ ೨೧, ೧೯೪೨

ಪ್ರೀತಿಯ ಕಿಟಿ,

ನಮ್ಮ ಅಡಗುತಾಣದ ಮುಖದ್ವಾರ ಯಾರಿಗೂ ಕಾಣದಂತೆ ರಹಸ್ಯವಾಗಿತ್ತು. ಹೊರ ಬಾಗಿಲಿನ ಮುಂಭಾಗದಲ್ಲಿ ಕಪಾಟೊಂದನ್ನು ಇಡುವುದು ಒಳ್ಳೆಯದೆಂದು ಕ್ರೇಲರ್ ಯೋಚಿಸಿದ್ದರು. [ಯಾಕೆಂದರೆ ಹಲವಾರು ಮನೆಗಳು ಸೈಕಲ್ಲುಗಳ ಕಾರಣದಿಂದ ಕಂಡುಹಿಡಿಯಲ್ಪಟ್ಟಿದ್ದವು.] ಆದರೆ ನಿಜಕ್ಕೂ ಈ ಕಪಾಟನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೊತ್ತೊಯ್ಯಬಹುದಾಗಿದ್ದು, ಬಾಗಿಲಿನಂತೆ ತೆರೆಯಬಹುದಾಗಿತ್ತು.

ವೊಸನ್ ಈ ಎಲ್ಲವನ್ನೂ ಮಾಡಿದರು. ಗುಪ್ತಸ್ಥಾನಕ್ಕೆ ಬರಲು ಅವರಿಗೆ ಬಿಡಲಾಗಿತ್ತು. ಅವರು ಇದಕ್ಕಿಂತ ಹೆಚ್ಚು ಸಹಾಯ ಮಾಡಲಾರರು. ನಾವು ಕೆಳಗಡೆ ಹೋಗಬೇಕೆಂದರೆ ಮೊದಲು ತಲೆ ಬಗ್ಗಿಸಿ ನಡೆದು ನಂತರ ಹಾರಿ ಜಿಗಿಯಬೇಕಿತ್ತು. ಮೊದಲ ಮೂರು ದಿನಗಳೂ ನಮಗೆಲ್ಲ ಹಣೆಯಲ್ಲಿ ದೊಡ್ಡ ದೊಡ್ಡ ಗಂಟಿನ ಬಾವುಗಳೆದ್ದವು. ಕಾರಣವೆಂದರೆ ಹಾಗೆ ಹಾರುವಾಗ ನಾವು ನೇರವಾಗಿ ಕೆಳಗಿನ ಬಾಗಿಲಿಗೆ ರಭಸವಾಗಿ ಹೋಗಿ ದೂಡಲ್ಪಡುತ್ತಿದ್ದೆವು. ಆದರೆ ಈಗ ಬಟ್ಟೆಯೊಂದಕ್ಕೆ ಮರದ ತೊಗಟೆಯನ್ನು ಹಣೆದು ಬಾಗಿಲಿನ ಮೇಲ್ತುದಿಗೆ ತೂಗುಹಾಕಿ ಮೊಳೆಹೊಡೆದಿದ್ದೇವೆ. ಅದು ಸಹಕಾರಿಯಾದೀತೇ… ನೋಡೋಣ!

ನಾನು ಈಗ ಹೆಚ್ಚು ಕೆಲಸ ಮಾಡುವುದಿಲ್ಲ. ಸೆಪ್ಟೆಂಬರವರೆಗೂ ನನಗೆ ನಾನೇ ರಜೆ ಕೊಟ್ಟುಕೊಂಡಿದ್ದೇನೆ. ಡ್ಯಾಡಿ ನನಗೆ ಪಾಠ ಹೇಳಿಕೊಡುತ್ತಿದ್ದಾರೆ. ನಾನೆಷ್ಟೊಂದನ್ನು ಮರೆತಿದ್ದೇನೆ ಎಂಬುದೇ ನನಗೆ ಆಶ್ಚರ್ಯ! ಇಲ್ಲಿಗೆ ಬಂದ ಮೇಲೆ ನಮ್ಮ ಜೀವನದಲ್ಲಿ ಸ್ವಲ್ಪ ಮಟ್ಟಿಗೆ ಬದಲಾವಣೆ ಆಗಿದೆ. ವ್ಯಾನ್ಡ್ಯಾನ್ ಮತ್ತು ನಾನು ಆಗಾಗ ಪರಸ್ಪರ ಜಗಳವಾಡುವುದನ್ನು ರೂಢಿಸಿಕೊಂಡಿದ್ದೇವೆ. ಇದಕ್ಕೆ ವ್ಯತಿರಿಕ್ತವಾಗಿ ಮಾರ್‍ಗೊಟ್‌ಳನ್ನು ಅವರು ಬಹಳ ಮೆಚ್ಚಿಕೊಳ್ಳುತ್ತಾನೆ. ಮಮ್ಮಿ ಕೆಲವೊಮ್ಮ ನನ್ನನ್ನು ಚಿಕ್ಕ ಮಕ್ಕಳಂತೆ ನಡೆಸಿಕೊಳ್ಳುವುದು ನನಗೆ ಸಹಿಸಲಾಗುವುದಿಲ್ಲ. ಉಳಿದಂತೆ ಎಲ್ಲ ಸಂಗತಿಗಳು ಚೆನ್ನಾಗಿ ನಡೆಯುತ್ತಿದೆ. ನನಗಿನ್ನೂ ಪೀಟರ ಎಂದರೆ ಇಷ್ಟವಾಗುವುದಿಲ್ಲ. ಆತ ತುಂಬಾ ಬೇಸರ ತರಿಸುತ್ತಾನೆ. ಅರ್ಧಕ್ಕಿಂತ ಹೆಚ್ಚು ವೇಳೆ ತನ್ನ ಹಾಸಿಗೆಯ ಮೇಲೆಯೇ ಬಿದ್ದುಕೊಂಡಿರುತ್ತಾನೆ. ಅಲ್ಪಸ್ವಲ್ಪ ಬಡಿಗತನ ಮಾಡುತ್ತಾನೆ. ಮತ್ತೆ ಇನ್ನೊಂದು ಸಣ್ಣನಿದ್ದೆ ಹೊಡೆಯುತ್ತಾನೆ. ಎಂತಹ ಹೆಡ್ಡ!

ಇದು ತುಂಬಾ ಸುಂದರವಾದ ವಾತಾವರಣ. ಬೇರೆಲ್ಲದರ ಹೊರತಾಗಿ ತೆರೆದ ಕಿಟಕಿಯಿಂದ ನುಸುಳುವ ಸೂರ್ಯ ಕಿರಣಗಳನ್ನು ಆಸ್ವಾದಿಸುತ್ತಾ ನಾವು ಅಟ್ಟದ ಮೇಲಿನ ಶಿಬಿರದ ಹಾಸಿಗೆಗಳಲ್ಲಿ ಬಿದ್ದುಕೊಳ್ಳುವುದನ್ನು ಚೆನ್ನಾಗಿ ಮಾಡಬಲ್ಲೆವು.

ನಿನ್ನ
ಆನ್

Tagged:

Leave a Reply

Your email address will not be published. Required fields are marked *

ಮೂಲ: ವಿ ಎಸ್ ಖಾಂಡೇಕರ ಎದುರದಡದಿ ನಿಂದು ಬಿದಿರಕೊಳಲ ತನ್ನ| ಅಧರದಿ ನುಡಿಸುವ ಚದುರ ರಂಗನ ಕಂಡೆ|| ಅದೇ ಶಾಲೆಬಿಟ್ಟು ಬಂದು ಕುಸುಮೆಯು ರಾಗದ ಪೆಟ್ಟಿಗೆಯನ್ನು ಬಾರಿಸುತ್ತ ಹಾಡುತ್ತಿದ್ದಳು. ಸಂಗೀತದಿಂದ ದಣುವು ಪರಿಹಾರವಾಗುವದೆನ್ನುವರು. ಆದರೆ ನಡುಮನೆಯಲ್ಲಿ ಬಿಳಿಯ ಪತ್ತಲವನ್ನೊಂದು ...

ನಿರಂಜನ ಬಹಳ ಜನ ಹೆಂಗಸರನ್ನು ನೋಡಿದ್ದ. ಆದರೆ, ಅವನ ದುರದೃಷ್ಟ-ಅವನು ನೋಡಿದವರೆಲ್ಲ ಸರಿಸಿದ ಸೆರಗಿನವರು, ಸಡಿಲಿಸಿದ ನಿರಿಯವರು. ಮೇಲಾಗಿ ಅವನು ಸುಂದರನೇನೋ ಹೌದು. ಆದರೆ ಗಂಡಸಿನ ಸೌಂದರ್ಯವಲ್ಲದು, ಹೆಂಗಸಿನ ಸೌಂದರ್ಯ, ಸಾಲದುದಕ್ಕೆ “ಎಲ್ಲ ಹೆಂಗಸರೂ ಹೀಗೆಯೆ ಬಾ ಎನ್ನುವುದು ...

ಭೋಜನ ಭೀಮಾಚಾರರ ಮಕ್ಕಳೇತಾನೆ ಆ ವೇದಾಂತ ಡಿಂಡಿಮ ರಾಜಾಚಾರ್‍ಯರು. ಭೀಮಾಚಾರ್‍ಯರು ತಮ್ಮ ಬಿರುದನ್ನು ಸ್ವಪ್ರಯಾಸದಿಂದಲೇ ಸಂಪಾದಿಸಿದರು. ತಮ್ಮ ಮಕ್ಕಳಲೊಬ್ಬನಾದರೂ ಸರಸ್ವತಿಯ ಕೈಹಿಡಿಯಲೆಂದು ಆಶೆಬಿಟ್ಟು ರಾಜಾಚಾರ್‍ಯರನ್ನು ಬಿರುದೊಣ್ಣೆಯ ವಶಕ್ಕೆ ಕೊಟ್ಟರು. ಇತ್ತಲಾಗಿ ರಾಜಾಚಾರ್‍ಯರಿ...

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...