Home / ಕವನ / ಕವಿತೆ / ಕಲ್ಯಾಣ ಬಸವ

ಕಲ್ಯಾಣ ಬಸವ

ಸಾಗಿ ಸದ್ಗುರು ಯೋಗಿ ಬಂದರ |
ಹೋಗಿ ನೋಡುಣ ಗುರು- |
ಮೋಕ್ಷವ ಬೇಡುಣ ||ಪ||

ಕಲ್ಯಾಣ ಮನಿಯಾಗ, ಎಲ್ಲ ಶರಣರ ಕಂಡೆ
ಬಲ್ಲಿದನ ಕಂಡೆ ಬಸವಣನ | ಗುರುವೆ || ಸಾ || ಪಾದಕ
ಚೆಲ್ಯಾಡಿ ಬಂದೆ ನನ ಮನವ | ಗುರುವೆ || ಸಾ || ೧

ಕಲ್ಯಾಣ ಪುರದಾಗ, ಎಲ್ಲರಿಗು ಕಲ್ಯಾಣ
ಕಲ್ಯಾಣ ಬಂತ ಜಗದಾಗ | ಗು | ಸಾ | ಬಸವಣ್ಣ
ಕಲ್ಯಾಣ ಕಟ್ಟಿ ಹೆಸರಾದ | ಗು | ಸಾ | ೨

ಬಸವ ನಿನ ಕಲ್ಯಾಣ, ದೆಸೆ ದಿಕ್ಕ ಕೇಳ್ಯಾವ
ಮುಸುಕಿ ಜನ ಬಂತು ಮಂಟಪಕ | ಗು | ಸಾ | ಕಲ್ಯಾಣ
ಉಸುರಾತೊ ಶಿವನೆ ಶರಣರಿಗೆ | ಗು | ಸಾ | ೩

ಶರಣರನ ನೆನದಾರ, ಸರಗೀಯ ಇಟ್ಟ್ಹಂಗ
ಅರಳ ಮಲ್ಲೀಗಿ ಮುಡದ್ಹಂಗ | ಗು | ಸಾ | ಕಲ್ಯಾಣ
ಶರಣರನ ನೆನೆಯೊ ಎಲೆ ಮನವ | ಗು | ಸಾ | ೪

ಅರಿಕೆ ಶರಣರ ನಾಮ, ಕುರುಹು ಕಲ್ಯಾಣಾತೊ
ಹೊರ ಒಳಗು ಬಿತ್ತು ಶಿವ ಬೆಳಕು | ಗು | ಸಾ | ತೊಳಬೆಳಗಿ
ನರಲೋಕವಾತ ಹರಲೋಕ | ಗು | ಸಾ | ೫

ಎಲ್ಲ ದಿಕ್ಕಿನಗಾಳಿ, ನಿಲ್ಲದಲೆ ಬೀಸ್ಯಾವ
ಕಲ್ಯಾಣ ಗಾಳಿ ಬಲುಬೀಸಿ | ಗು | ಸಾ | ನಾಡಾಗ
ಎಲ್ಲಾರೊಕ್ಕ್ಯಾರ ಶಿವನುಡಿಯ | ಗು | ಸಾ | ೬

ಒಳಗಿರುವ ಕಲ್ಯಾಣ, ಇಳೆಯ ಬೆಳಗುವ ಬೆಳಕು
ಹೊಳೆಯಾಗಿ ಹರಿದು ತಿಳಿ ಬಂತು | ಗು | ಸಾ | ಹೊಸಮತಕ
ಬೆಳಕು ಹುಲಸಾತ ಜಗದಾಗ | ಗು | ಸಾ | ೭

ಹೂವಾಗಿ ಅರಳ್ಯಾರ, ಆವಾಗಿ ಕರೆದಾರ
ದೇವರಿಗೆ ಮಿಗಿಲ ಕಲ್ಯಾಣ | ಗು | ಸಾ | ಶರಣರಿಗೆ
ಯಾವ ಬಗೆಯಿಂದ ನೆನಬೇಕ | ಗು | ಸಾ | ೮

ಬಾರೊ ಬಲ್ಲಿದ ಬಸವ, ತೋರೊ ಅಲ್ಲಮದೇವ
ಸಾರೊ ನೀ ಚೆನ್ನಬಸವಣ್ಣ | ಗು | ಸಾ | ಕಲ್ಯಾಣ
ಧೀರ ಮಡಿವಾಳ ನೀ ಕಾಯೋ | ಗು | ಸಾ | ೯

ಸತ್ಯಸಾಗರದಾಗ, ನಿತ್ಯ ಮಂದಿರವೇನ
ಗೊತ್ತುಳ್ಳ ಹಾದಿ ಶಿವಭಕ್ತಿ | ಗು | ಸಾ | ಕಲ್ಯಾಣ
ಎತ್ತ ನೋಡಿದರ ಕೈಲಾಸ | ಗು | ಸಾ | ೧೦

ಅಂಗಳದ ಮಂಟಪಕ, ಲಿಂಗ ಬೆಳದಿಂಗಳವ
ಜಂಗ ನುಡಿಸಿದ ಕಲ್ಯಾಣ | ಗು | ಸಾ | ಜಂಗಮರ
ಸಂಗ ಶಿವಬೆಳಕ ನಿಜಪದಕ | ಗು | ಸಾ | ೧೧

ಕಲ್ಯಾಣ ಬಯಲಾಗ, ಎಲ್ಲ ಶರಣರು ಕೂಡಿ
ಬಲ್ಲವರು ಮಾತ ಹೇಳ್ಯಾರ | ಗು | ಸಾ | ಜನದಾಗ
ಹೊಲೆ೦ಬು ಸಬುದ ಮಾಯಾತ | ಗು | ಸಾ | ೧೨

ಮಾತು ಕುಲಹೊಲೆಯಲ್ಲ, ಜಾತಿ ಸೂತಕವಲ್ಲ
ನೀತಿ ನೀರ್ಬಳಕಿ ಕಲ್ಯಾಣ | ಗು | ಸಾ | ಮಹಮನೆಗೆ
ದಾತ ಬಸವಣ್ಣ ಶಿವಭಕ್ತ | ಗು | ಸಾ | ೧೩

ಶಿವಭಕ್ತಿ ಹೂ ಅರಳಿ, ಶಿವಭಕ್ತ ಬಸವಣ್ಣ
ಶಿವಣಾನ ತೊರೆಯು ಚನಬಸವ | ಗು | ಸಾ | ಪ್ರಭುದೇವ
ಶಿವಗಣ್ಣು ಲೋಕ ನೋಡುದಕೆ | ಗು | ಸಾ | ೧೪

ಈಸಿ ದಾಟುನ ಬಾರ, ಖಾಸ ಶರಣರ ಹಾಡಿ
ಬೀಸಿ ಹಾಡೂನ ಕಲ್ಯಾಣ | ಗು | ಸಾ | ಶರಣರಿಗೆ
ಹಾಸಿ ಈ ಮನವ ಸವಿಯಾಲೆ | ಗು | ಸಾ | ೧೫

ಓಂ ಶಿವನೆ ಬಸವಣ್ಣ, ಓಂ ಶಿವನೆ ಪ್ರಭುದೇವ
ಓಂ ಶಿವನ ಶಕ್ತಿ ಚನಬಸವ | ಗು | ಸಾ | ಕಲ್ಯಾಣ
ಓಂ ಶಿವನೆ ಶರಣು ಶರಣರಿಗೆ | ಗು | ಸಾ | ೧೬
*****

Tagged:

Leave a Reply

Your email address will not be published. Required fields are marked *

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...