ಭಿಕ್ಷುಕನೊಬ್ಬ ಬಾಗಿಲಲ್ಲಿ ನಿಂತು `ಭಿಕ್ಷಹಾಕಿ ತಾಯೀ’ ಎಂದು ಕೂಗುತ್ತಿದ್ದ. ಯಜಮಾನತಿ ಬಂದು ಒಂದು ಹಿಡಿ ಅಕ್ಕಿ ಹಾಕಲು ಮುಂದಾದಳು. ಅದನ್ನು ಕಂಡ ಭಿಕ್ಷುಕ, “ತಾಯಿ ಈ ಭಿಕ್ಷೆ ಬೇಡ, ನನಗೆ ಇದರ ಬದಲು ತೊಗರಿ ಬೇಳೆ ಹಾಕಿ ಬಿಡಿ, ಬೇಕಾದರೆ ನನ್ನ ಜೋಳಿಗೆಯಲ್ಲಿರುವ ಅಕ್ಕಿ ನಾನೇ ನಿಮಗೆ ಕೊಡುತ್ತೇನೆ.” ಅಂದ. ಕೋಪಗೊಂಡ ಯಜಮಾನತಿ “ತೊಗರಿಬೇಳೆ ಎಂದರೆ ಏನೆಂದು ತಿಳಿದೆ; ಅದು ಚಿನ್ನ ಕಣೋ ಚಿನ್ನ. ನೀನು ಅಕ್ಕಿ ಹಾಕಿಸಿ ಕೊಳ್ಳದಿದ್ದರೆ
ನನಗೇನೂ ನಷ್ಟವಿಲ್ಲ ಮುಂದಕ್ಕೆ ಹೋಗು.”
***