ಹಿಡಿ ಹಿಡಿ ಹೋಗ್ತದ ಐಸುರ
ಹೋಗ್ತದ ಐಸುರ                                       ||ಪ||

ಜಡಿ ಜಡಿ ಬಲವಾಯ್ತು ಕರ್ಬಲ ಕರ್ಬಲ
ಜಡಿದರ ಮಾರ್ಬಲಯೆಲ್ಲದ ಸಾರ್ಬಲದೊಳು ನೀ ನಡಿ ನಡಿ   ||೧||

ಪಡಿ ಪಡಿ ಸಮ ರಂಗಭೂಮಿಯ ಶಾದತ್ತ ಪಡಿ ಶಾದತ್ತ
ಪಡಿದರೆ ನೀ ದಯವಾದೀತು ಆ ಮಹಾ ಫಲದಲ್ಲಿ ನುಡಿ ನುಡಿ  ||೨||

ಒಡಿ ಒಡಿ ಕುವಲಯದಿ ಶಿಶುವಿನಾಳ
ಒಡಿಯದಿದ್ದರೆ ನಿನ್ನ ಹೊಡದೇವೋ ಮಾರಿಗೆ
ಬಿಡದೆ ಸವ್ವಾಲ ಜವಾಬ ಕೊಡಿ ಕೊಡಿ                      ||೩||

*****