ಶಿವಮುನಿಗಣಾ
ಢಂ ಢಂ ಡಮರುಗ
ನಟರಾಜ ನಾಟ್ಯವಿಲೋಲ
ತೊಮ್ ತನಾಂತ ನಾದರೂಪವಿಹಾರಿ||
ಝಣ ಝಣ ಝಣ ಕುಮಿತ
ಮನ ಮನ್ವಂತರಾ ರೂಪ
ಜಟೌ ಜಟೌ ಸ್ವರೂಪ
ಗಜ ಚರ್‍ಮಾಂಭರ ವಿಶ್ವವಿಹಾರಿ ||ಶಿ||
ಯೋಗ ಭೋಗ ಮಾನಸ
ಕೈಲಾಸ ವಾಸ ವಿಲಾಸ ಪಾರ್‍ವತಿಪತೇ
ಹಿಮಮಣಿ ಮುಕುಟ ತ್ರಿಶೂಲ
ಸರ್‍ವಾಂಕಿತ ಶೋಭಿತ ವಿಭೂತಧಾರಿ ||ಶಿ||
ಚಂದ್ರಕಳಾ ಭೂಷಿತ
ನಾಗಾಭರಣ ಶೋಭಿತ
ಟಕಿತಕಳಾಂತ ದಿಮಿಟಕಿತ ವರನಂದೀಶ
ಗಂಗಾಧರ ಶಿವಶರಣಾ ಹಂಸನಾದವಿಹಾರಿ ||ಶಿ||
*****
Latest posts by ಹಂಸಾ ಆರ್ (see all)
- ಹರಿಚರಣ ರತನ - March 4, 2021
- ಮನದೊಳಗಣ… - February 25, 2021
- ಮೋಹನ ಗಿರಿಧರ - February 18, 2021