ಔಷಧಿ ಶಾಸ್ತ್ರದಲ್ಲಿ ವಿನೂತನವಾಗಿ ಕಂಡು ಹಿಡಿಯಲಾದ ಔಷಧಿ ತಯಾರಿಕೆಯ ಸಾಫ್ಟ್‌ವೇರ್‌ನ್ನೂ ಗಣಕಯಂತ್ರದಲ್ಲಿ ಕಂಡು ಹಿಡಿಯಲಾಗಿದೆ. ಹೊಸ ಔಷಧಿಗಳ ರಸಾಯನಿಕ ರಚನೆಗಳನ್ನು ವಿನ್ಯಾಸಗೊಳಿಸಿದ ಕೀರ್ತಿ ವಿಜ್ಜಾನಿ ಡೇವಿಡ್ ನೋವರ್ ಅವರಿಗೆ ಸಲ್ಲುತ್ತದೆ. ವಿವಿಧ ರಾಸಾಯನಿಕಗಳು, ರೋಗಾಣುಗಳು ಇತ್ಯಾದಿಗಳ ಮಾಹಿತಿಗಳನ್ನೂ ಗಣಕ ಯಂತ್ರಕ್ಕೆ
ಕೊಟ್ಟರೆ ಕೆಲವೇ ನಿಮಿಷಗಳಲ್ಲಿ ಯಾವ ರೋಗ ಎಂದು ಪರದೆಯ ಮೇಲೆ ಮೂಡಿ ಈ ರೋಗಕ್ಕೆ ಇಂಥಹ ಔಷಧಿಯನ್ನು ಉಪಯೋಗಿಸಬೇಕೆಂದು ಪುನಃ ಪರದೆಯ ಮೇಲೆ ಮೂಡುತ್ತದೆ. ಪ್ರತಿಯೊಂದು ಆಸ್ಪತ್ರೆಗಳಲ್ಲಿಯೂ ಇಂಥಹ ಗಣಕ ಯಂತ್ರಗಳಿದ್ದರೆ ರೋಗಿಗಳ ಸಂಖ್ಯೆ ಕಡಿಮೆಯಾಗುವುದಲ್ಲದೇ ನಿರ್ದಿಷ್ಟವಾದ ನಿಖರವಾದ ಔಷಧಿಯ ಬಗ್ಗೆ ತಿಳಿಸಿ, ವೈದ್ಯರಿಗೆ ಅನುಕೂಲ ಮಾಡಿಕೊಡುತ್ತದೆ. ಜೊತೆಗೆ ಈ ಗಣಕಯಂತ್ರದಲ್ಲಿ ಔಷಧಿಯ ಭೌತಿಕ ಮತ್ತು ರಾಸಾಯನಿಕ ರಚನೆಗಳು ಹೇಗಿರಬೇಕು ಎಂಬ ಇತ್ಯಾದಿ ಮಾಹಿತಿಗಳನ್ನು ಕ್ಯಾಲ್ಯುಕ್ಲೇಟ್ ಮಾಡಿ ಸಾದರಪಡಿಸುತ್ತದೆ.
*****