ಹೋಲಿಸದಿರೆಲೆ ಚೆಲುವ ಇನ್ನೇತಕು ನನ್ನ ನಗುವ ಶ್ರುತಿಮಾಡಿದ ವೀಣೆಯ ತಂತಿ ಬೆಳದಿಂಗಳ ಮಲ್ಲಿಗೆ ಪಂಕ್ತಿ ಪರಿಮಳ ಬೀರುವ ಸುರಪಾರಿಜಾತ ಕಿಲ ಕಿಲ ನದಿ ದೈವ ಸಂಪ್ರೀತ ಎನಬೇಡ ನಗು ನನ್ನ ತುಟಿಯಂಚಿನೊಳೆಂದು ಎನಬೇಡ ನಗು...
ಮೇಲೂರ ಮುತ್ತಣ್ಣ ಬಲು ಬುದ್ಧಿವಂತ ಅವನ ಮಾತೇ ಮಾತು ಅದಕಿಲ್ಲ ಅಂತ ಯಾರೆಂಬುದೊಂದಿಲ್ಲ ವೇಳೆಯೊಂದಿಲ್ಲ ಎಲ್ಲ ಜನವೂ ಬಳಕೆ, ನಯಕೆ ಕುಂದಿಲ್ಲ. ನಮ್ಮ ಮನದಾರೋಗ್ಯಕವನ ಸಹವಾಸ ಮಲೆಗಾಳಿಯಂತಿಹುದು; ಹೊಳೆಬಗೆಯ ಹಾಸ ಮಂಕನೇಳಿಪುದಣ್ಣ ಏನದರ ಬಣ್ಣ!...