Day: October 20, 2022

ಎಲ್ಲಿಗೆ

ಗಿರಾಕಿ: ಏನಯ್ಯ ನಿಮ್ಮ ಹೋಟ್ಲು ಇಡ್ಲಿ ಇಷ್ಟು ಕಳಪೆ. ಎಲ್ಲಿ ಮ್ಯಾನೇಜರನ್ನು ಕರೆ..” ಮಾಣಿ: “ಅವರಿಲ್ಲಾ ಸಾರ್” ಗಿರಾಕಿ: “ಎಲ್ಲಿ ಹೋಗಿದ್ದಾರೆ?” ಮಾಣಿ: “ಪಕ್ಕದ ಹೊಟ್ಲಿಗೆ ಇಡ್ಲಿ […]

ಸುಲಿದವರು

ರಾಮನನ್ನು ದೇವರಾಗಿಸಿ ಗಳಿಸಿದವರು ಸಾವಿರಾರು ಬಾಬರನಿಗೆ ಗೋರಿಕಟ್ಟಿ ಗಳಿಸಿದವರು ಸಾವಿರಾರು ಎಲುಬಿನ ಗೂಡಾದ ನಿನ್ನನ್ನೇ ಬಂಡವಾಳ ಮಾಡಿಕೊಂಡು ಸುಲಿದವರು ಸಾವಿರಾರು. *****

ಸಾವನ್ನೊಪ್ಪದೆ ಸಂಕಟವನಪ್ಪಿದೊಡೆಂತು?

ಸಾವಯವವೆಂದರದು ಸಾಯುವ ಕೃಷಿಯಂ ದವಸರದೊಳೊಬ್ಬರಬ್ಬರಿಸಿದರಂದು. ನಾ ಸಾವರಿಸಿ ಆಲೋಚಿಸಿದೊಡಲ್ಲಿ ತಿಳಿಯಿತ ದುವೆ ಸರಿಯೆಂದು, ಜೀವ ನಿಯಮವೆ ಹುಟ್ಟು ಸಾವಿನೊಳಿರಲು ಸಾವಿರದಾ ನಿರವಯವ ತಪ್ಪೆಂದು – ವಿಜ್ಞಾನೇಶ್ವರಾ *****