ಈ ಮರಕ್ಕೆ ಚಿಗುರುವಾಸೆ ಮುಗಿದಿದೆ ಎಲ್ಲಾ ಚಿಕಿತ್ಸೆ ದೋಹದದ ಬಾಕಿಗಾಗಿ ಕಾಯುತ್ತಿದೆ. ಒದೆಯಲೊಬ್ಬ ಬರಬೇಕಷ್ಟೇ. ಬಂದಾನೋ ಬಂದಾನೋ ಸವಾರ ಯಾವ ಊರಿನ ಸರದಾರ ಇವನೆದೆ ಒಸರಿತು ದ್ರವವಾಗಿ ಕರಗಿ ಹರಿದನಿವ ನನಗಾಗಿ ಹೂ ಮುಡಿಯಿತು...
ಮನವನೋದಿಕೋ ತಾತ ದ್ರೋಣಾಚಾರ್ಯರ ದೇಹಾಂತ್ಯದ ಬಳಿಕ ಇನ್ನು ಬದುಕುಳಿದು ಮಾಡುವುದೇನು ಎಂಬ ಭಾವ ಭೀಷ್ಮರನ್ನು ಕಾಡತೊಡಗಿತು. ದ್ರೋಣಾಚಾರ್ಯರನ್ನು ಹಾಗೆ ವಧಿಸಬೇಕಾದ ಪ್ರಮೇಯವಿರಲಿಲ್ಲ. ಹೆಬ್ಬೆರೆಳು ಕಳಕೊಂಡ ವಯೋವೃದ್ಧ ಗುರುವನ್ನು ಕೊಲ್ಲಲು ಯುಧಿಷ್ಠಿರ ಸುಳ್ಳು ಹೇಳಬೇಕಾದ ಪರಿಸ್ಥತಿ...