ಆಯಸ್ಸು
ದೊಡ್ಡ ದೊಡ್ಡ ಮರಗಳು ನೀಡುವ ಹಣ್ಣುಗಳು ಹಲಸು ಮಾವು ಉಳಿಯಲಾರವು ಒಂದೆರಡು ವಾರಗಳು ಸಣ್ಣ ಸಣ್ಣ ಪೈರುಗಳು ನೀಡುವ ಕಾಳುಗಳು ರಾಗಿ ಜೋಳ ಧಾನ್ಯಗಳು ಉಳಿಯುತ್ತವೆ ಹತ್ತಾರು ವರ್‍ಷಗಳು *****
ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ ಇದು ನಿಜವಾಗಿಯೂ ನನ್ನೆದೆಯ ಭಯಾನಕತೆಯೇ, ಇಲ್ಲ…. ನಿಸರ್ಗದ ನಿಜವಾದ ಮುಖವೋ…? ನನ್ನ ಅಸ್ತಿತ್ವವೇನೋ ಕ್ಷುಲ್ಲಕವಾದುದು. ಇಡೀ ಕಾನನವೇ ಅದುರುವಂತಹ ಈ ಗರ್ಜನೆ ಸಿಂಹದ್ದು ಮಾತ್ರವಾಗಿರಲು ಸಾಧ್ಯ ಅಥವ […]