ಗಳಿಗೆಬಟ್ಟಲ ತಿರುವುಗಳಲ್ಲಿ – ೩೫

ಕನ್ನಡಿಗೆ ಹಿಡಿದ ಹಸಿವೆಗೆ ಇಲ್ಲ ಪ್ರತಿಫಲಿಸುವ ಬೆಳಕಿಂಡಿ ಅದಕಿಲ್ಲ ಕಣ್ಣು. ರೊಟ್ಟಿಯ ಮೈ ತುಂಬ ಕಣ್ಣು ಕಣ್ಣಿನ ತುಂಬ ಕನ್ನಡಿ ಒಂದೊಂದು ಕನ್ನಡಿಗೂ ಸಾವಿರಾರು ಪ್ರತಿಬಿಂಬ.

ಭೂಮಿ ಪಲ್ಲವಿ

-೧- ಭೂಮಿ ಪಲ್ಲವಿಸುತ್ತಿದೆ ಅಡಿಮುಡಿಯೂ ಹಾಡು ಹರಿಯುತ್ತಿದೆ ಬರುವ ಚಳಿಗಾಲಕೆ ಕಾದು ಕುಳಿತಿಹೆ ಇಬ್ಬನಿ ಕರಗಲು ಕೈಯುಜ್ಜಿ ಬೆಚ್ಚನೆಯ ಬೆಂಕಿಯ ಶಾಖ ಪಡೆಯಲು ಹಾತೊರೆಯುತಿಹೆ ಸದ್ದಿಲ್ಲದೇ ಬರುವ ನಸುಕಿನ ಹಾಗೆ ಬಂದು ಬಿಡು ಒಲವೆ...............