ಕುದುರೆ ಮತ್ತು ಮುತ್ತುಗಳು

ಮುತ್ತಿನಂತಹ ಅಕ್ಕಂದಿರಿಬ್ಬರನ್ನು ಕುದುರೆಯೊಂದು ಕೆಡವಿ ಕಂಗೆಡಿಸಿದ ಸುದ್ದಿ ನಿಮಗೂ ತಲುಪಿರಬಹುದು ಅಕ್ಕಂದಿರೇ ಹುಚ್ಚುತನದಿಂದ ಕುದುರೆಯನ್ನು ಕೆಣಕಿ ಕಂಗೆಟ್ಟರೆಂದು ಹಬ್ಬಿಸಿದ ಸುದ್ದಿಯನ್ನು ನೀವು ನಂಬಿರಲೂಬಹುದು. ಬಯಲೊಳಗೆ ಬಯಲಾದರಂತೆ ಅಕ್ಕಂದಿರು ಧೂಳೊಳಗೆ ಮೈ ಮುಚ್ಚಿಕೊಂಡವರನ್ನು ಮೆರವಣಿಗೆಯಲ್ಲಿ ಕುಣಿಸಿದರಂತೆ...

ಬದುಕು

ಬದುಕೆಂಬುದೊಂದು ತೆರೆದ ವಿಶ್ವವಿದ್ಯಾಲಯ ದೇವರೇ ಕುಲಾಧಿಪತಿ ಬೇಕಿದ್ದನ್ನು ಆರಿಸಿಕೊಂಡು ನೀನೇ ಓದಿಕೊಳ್ಳಬೇಕು ಸಾವಕಾಶ: ಪಾಸಾಗಬೇಕೆಂದು ಅವಸರಿಸಬೇಡ ಹುಷಾರು ಇಲ್ಲಿ ಪಾಸಾದವರಿಗವಲ್ಲ; ಫೇಲಾದವರಿಗೆ ಮಾತ್ರ ಪ್ರವೇಶಾವಕಾಶ *****