ಹಾಯ್ಕಗಳು
ಬೇಸಿಗೆಯ ಸಂಜೆ ತಂಗಾಳಿ ಬೀಸಿತು ತಂಪಿನಲಿ ಅವನ ಉಸಿರಿತ್ತು. ರಾತ್ರಿಯಲಿ ಆಕಾಶದ ತುಂಬ ಬೆಳದಿಂಗಳು ಹರಡಿದೆ ಅಂಗಳದಲಿ ಮಕ್ಕಳು ತುಂಬಿಕೊಂಡಿವೆ. ಮುಂಜಾವಿನಲಿ ಹನಿಹನಿ ಇಬ್ಬನಿ ಹಾಸಿವೆ ನನ್ನಲ್ಲಿ ಕವಿತೆಯ ಜೀವ ಒಸರುತಿದೆ. ಮಧ್ಯಾಹ್ನದಲಿ ಒಂದು ಚಮಚ ನೀರು ಭಾವಗಳನ್ನು ನಿಶ್ಶಬ್ದವಾಗಿಸುತ್ತಿದೆ. ಓಣಿಯಲಿ ನಡುರಾತ್ರಿ ಹೆಜ್ಜೆ ಸಪ್ಪಳಗಳು ನಾಯಿಗಳು ತುಂಬ ಊಳಿಡುತ್ತವೆ. ಮಗು ಗಲಗಲ ತೊದಲಿತು ಎದೆಯಲಿ […]