ಗರಿಯೊಡೆದ ಹಕ್ಕಿ

ಬಣ್ಣ ಬಣ್ಣದ ಹೂಗಳು, ಗಾಜಿನ ಚೂರುಗಳು ಚಿತ್ತಾರದ ಗರಿಗಳು ತರಾವರಿ ಬೆಣಚುಕಲ್ಲು, ಸಿಂಪಿ ಕವಡಿಗಳ ತಂದು ಸಂಭ್ರಮಿಸುವ- ಮುಂಜಾವಿನ ಮಂಜು ಮುಸ್ಸಂಜೆಯ ಕೆಂಪು ಪ್ರೀತಿಸುವ- ಆಕಾಶದಂಗಳದೊಳು ಹಾರಾಡಿ ಏನೆಲ್ಲಾ ಬಾಚಿ ತಬ್ಬಿಕೊಳ್ಳುವ ಕನಸುಗಳಿಗೆ ಕಾವೂಡಿಸುವ...

ಹೊಸಿಲಿಲ್ಲದ ಬಾಗಿಲು

ಮನೆಗೆ ಹಿರೀಮಗ ಹೊಸಿಲು ಎರಡೂ ಒಂದೇ ಬೊಟ್ಟು ಬಳಿದುಕೊಂಡರೂ ಎಡವುವವರು, ತುಳಿಯುವವರು, ದಾಟುವವರು ಇದ್ದದ್ದೇ ಮನೆಯ ಕಾಯುವ ಭಾರ ಹೊಸಿಲಿಗೂ ಹಿರಿ ಮಗನಿಗೂ ಸಮನಾಗಿ ಹಂಚಿಕೆಯಾಗಿದೆ ಆಕಳಿಸಿದರೆ ತಲಬಾಗಿಲ ಮೇಲೆ ಹಲ್ಲಿ ಲೊಚಗುಟ್ಟಿ ಎಚ್ಚರಿಸುತ್ತದೆ...