
ಇಬ್ಬರು ಕಳ್ಳರು ಊರನ್ನು ದೋಚಿದರು. ರೈತರ ಕತ್ತು ಮುರಿದರು. ಒಬ್ಬ ಹಸಿದ ತೋಳದಂತೆ ತೆಳ್ಳಗಿದ್ದ. ಇನ್ನೊಬ್ಬ ಜಗದ್ಗುರುವಿನಂತೆ ದಪ್ಪಗಿದ್ದ. ಇಬ್ಬರು ಕಳ್ಳರಲ್ಲಿ ಅಷ್ಟೇಕೆ ವ್ಯತ್ಯಾಸ? ಅವರಲ್ಲೊಬ್ಬ ಒಡೆಯ, ಇನ್ನೊಬ್ಬ ಗುಲಾಮ. ಒಡೆಯ ಕೆನೆಹಾಲು ಕುಡ...
ಹದುಳವಿಲ್ಲದ ಬದುಕು ಬಹಳ ಕಂಡಿದ್ದೇನೆ. ನಗು ನಗುತ್ತ ಹರಿವ ನದಿಯ ಉಸಿರು ಕಟ್ಟಿ ಒಣಗಿತ್ತು, ನಳನಳಿಸುವ ಎಲೆ ವ್ಯರ್ಥ ಉದುರಿ ಬಿದ್ದು ಒಣಗಿತ್ತು, ಹುಮ್ಮಸ್ಸಿನ ಮಣಕದ ಕಾಲು ಮುರಿದಿತ್ತು, ನಿಶ್ಚಲ ಮಧ್ಯಾಹ್ನದ ತೂಕಡಿಕೆಯಲ್ಲಿ ಪ್ರತಿಮೆ ನಿಂತಿತ್ತು,...
ಒರೆಸಿಬಿಡು ಬೇಕಾದರೆ ಗೋಳಿಡುವ ಈ ದುರ್ಬಲ ಬದುಕನ್ನು, ಬೋರ್ಡಿನ ಮೇಲೆ ಬರೆದ ಅಲ್ಪಾಯುಷಿ ಅಕ್ಷರಗಳನ್ನು ಡಸ್ಟರು ಸುಮ್ಮನೆ ಒರೆಸಿಬಿಡುವಂತೆ. ನಿನ್ನವರ್‍ತುಲಕ್ಕೆ ಮತ್ತೆ ಹೆಜ್ಜೆ ಇಡಲು ಕಾದಿದ್ದೇನೆ ನಾನು ಹೆಜ್ಜೆ ಇಟ್ಟು ನಡೆದು ಬಳಲಿದ ಹಾದಿಗಳೆಲ್...
ಕಡಲ ಉಪ್ಪು ನೀರಿನಲ್ಲುರುಳುರುಳಿ ಒರಟಾದ ಕಲ್ಲಿನಂತೆ, ಅಪಳಿಸುವ ಅಲೆಗೆ ಎದೆಯೊಡ್ಡಿ, ಬಂದೇ ಬರುವ ಚಳಿಗೆ ಮಳೆ ಗಾಳಿ ಬಿಸಿಲಿಗೆ ಸಾಕ್ಷಿಯಾಗಿ ಕಾಲದ ಕಟ್ಟು ಮೀರಿದ ಬಂಡೆಗಲ್ಲಿನಂತೆ ಸಹಜವಾಗಿ ಇದ್ದುಬಿಡಬಹುದಾಗಿತ್ತು. ಹಾಗೆ ಆಗಲಿಲ್ಲ. ತನ್ನ ಕುರಿತು...
ಮುತ್ತು ಚೆಲ್ಲಾಪಿಲ್ಲಿ. ಹಾರಕಟ್ಟಿದ ದಾರವು ಹರಿಯಿತೆ? ಮುತ್ತುಗಬನಾಯ್ದು ಕಟ್ಟಿದರೂ ಮತ್ತೆ, ಫಲವೇನು? ನೀನಿಲ್ಲ. ಪೋಣಿಸಿದ ಮುತ್ತು ಹಾರವಾಗಲು ನಿನ್ನ ಸದೃಢ ಕೊರಳು ಬೇಕೇ ಬೇಕು. ಚಳಿ ಮುಂಜಾವು, ಇರುಳಿನೊಡನೆ ಕಾದಾಡಿ ಬಳಲಿ, ಬಿಳುಪೇರಿ, ಸೂರ್ಯ ಹ...









