
ಕರಿ ಘನ ಅಂಕುಶ ಕಿರಿದೆನ್ನಬಹುದೆ ಬಾರದಯ್ಯಾ ತಮಂಧ ಘನ ಜ್ಯೋತಿ ಕಿರಿದೆನ್ನಬಹುದೆ ಬಾರದಯ್ಯಾ ಮರಹು ಘನ ನಿಮ್ಮ ನೆನೆವ ಮನವ ಕಿರಿದೆನ್ನಬಹುದೆ ಬಾರದಯ್ಯಾ ಕೂಡಲಸಂಗಮದೇವಾ [ಕರಿ-ಆನೆ, ಘನ-ದೊಡ್ಡದು, ತಮಂಧ-ಕತ್ತಲು] ನಮ್ಮ ತಿಳಿವಳಿಕೆ ಸ್ಥೂಲವಾದ್ದನ್ನ...
ಕಚ್ಚುವ ಹಾವ ಹಿಡಿವುದಕ್ಕೆ ಗಾರುಡವ ಕಲಿಸಿದುದಿಲ್ಲ ಕುತ್ತುವ ಹಸುವಿನ ಕೊಂಬ ಹಿಡಿಯ ಕಲಿಸಿದುದಿಲ್ಲ ಇದು ನಿನಗೆ ದಿಂಡೆಯತನವೊ ನಿರಂಗ ನಿಃಕಳಂಕ ಮಲ್ಲಿಕಾರ್ಜುನಾ [ಗಾರುಡ-ಹಾವಿನ ವಿಷವನ್ನು ಇಲ್ಲವಾಗಿಸುವ ಗರುಡ ಮಂತ್ರ, ದಿಂಡೆ-ಬಂಡೆ, ಮರದ ಬೊಡ್ಡೆ,...
ಕಂಡುದ ಹಿಡಿಯಲೊಲ್ಲದೆ ಕಾಣದುದನರಸಿ ಹಿಡಿದಹೆನೆಂದರೆ ಸಿಕ್ಕದೆಂಬ ಬಳಲಿಕೆಯ ನೋಡಾ ಕಂಡುದನೆ ಕಂಡು ಗುರುಪಾದವ ಹಿಡಿದಲ್ಲಿ ಕಾಣದುದ ಕಾಣಬಹುದು ಗುಹೇಶ್ವರಾ ಅಲ್ಲಮನ ವಚನ. ಕಂಡದ್ದನ್ನು ಬಿಟ್ಟು ಕಾಣದಿರುವುದನ್ನು ಹುಡುಕಿ ಹಿಡಿಯುತ್ತೇನೆಂದು ಹೊರಟರೆ ...
ಓದಿ ಬೋಧಿಸಿ ಇದಿರಿಗೆ ಹೇಳವನ್ನಬರ ಚದುರತೆಯಲ್ಲವೆ ತಾ ತನ್ನನರಿದಲ್ಲಿ ಆ ಅರಿಕೆ ಇದಿರಿಗೆ ತೋರಿದಲ್ಲಿ ಅದೆ ದೇವತ್ವವೆಂದನಂಬಿಗ ಚೌಡಯ್ಯ [ಚದುರತೆ-ಚಾತುರ್ಯ] ಅಂಬಿಗ ಚೌಡಯ್ಯನ ವಚನ. ಚಾತುರ್ಯ ಯಾವಾಗ ಬೇಕೆಂದರೆ ನಮಗೆ ಗೊತ್ತಿರುವುದನ್ನು ಇನ್ನೊಬ್ಬರ...
ಒಲಿದವರ ಕೊಲುವಡೆ ಮಸೆದ ಕೂರಲಗೇಕೆ ಅವರನೊಲ್ಲೆನೆಂದಡೆ ಸಾಲದೆ ಮಹಾಲಿಂಗ ಗಜೇಶ್ವರನ ಶರಣರನಗಲಿದಡೆ ತುಪ್ಪದಲ್ಲಿ ಕಿಚ್ಚ ನಂದಿಸಿದಂತಾದೆನವ್ವಾ ಗಜೇಶ ಮಸಣಯ್ಯನ ವಚನ. ನಾವು ಪ್ರೀತಿಸಿದವರನ್ನು ಕೊಲ್ಲುವುದಕ್ಕೆ ಮಸೆದು ಹರಿತಮಾಡಿದ ಕತ್ತಿ ಯಾಕೆ ಬೇಕು,...
ಒಡಲುಗೊಂಡವ ಹಸಿವ ಒಡಲುಗೊಂಡವ ಹುಸಿವ ಒಡಲುಗೊಂಡವನೆಂದು ನೀನೆನ್ನ ಜಡಿದೊಮ್ಮೆ ನುಡಿಯದಿರಾ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡಾ ರಾಮನಾಥ ಜೇಡರ ದಾಸಿಮಯ್ಯನ ವಚನ. ಕಳಬೇಡ, ಕೊಲಬೇಡ ಎಂದಿತ್ಯಾದಿಯಾಗಿ ಬಸವಣ್ಣ ಹೇಳಿದ್ದಕ್ಕೆ ಪ್ರತಿಯಾದ ಸವಾಲಿನಂತಿದ...
ಏರಿಯ ಕಟ್ಟಬಹುದಲ್ಲದೆ ನೀರ ತುಂಬಬಹುದೆ ಕೈದುವ ಕೊಡಬಹುದಲ್ಲದೆ ಕಲಿತನವ ಕೊಡಬಹುದೆ ವಿವಾಹವ ಮಾಡಬಹುದಲ್ಲದೆ ಪುರುಷತನವ ಹರಸಬಹುದೆ ಘನವ ತೋರಬಹುದಲ್ಲದೆ ನೆನಹ ನಿಲಿಸಬಹುದೆ ಓದು ಒಕ್ಕಾಲು ಬುದ್ಧಿ ಮುಕ್ಕಾಲು ಎಂಬ ಲೋಕದ ಗಾದೆಮಾತಿನಂತೆ ಸದ್ಗುರುಕಾರು...
ಎಲ್ಲರೂ ಓದುವುದು ವಚನಂಗಳು ಎಲ್ಲರೂ ನುಡಿವರು ಬೊಮ್ಮವ ಎಲ್ಲರೂ ಕೇಳುವುದು ವಚನಂಗಳು ಹೇಳುವಾತ ಗುರುವಲ್ಲ ಕೇಳುವಾತ ಶಿಷ್ಯನಲ್ಲ ಹೇಳಿಹೆ ಕೇಳಿಹೆನೆಂಬನ್ನಕ್ಕರ ವಿರಕ್ತಿಸ್ಥಲಕ್ಕೆ ಭಂಗ ನೋಡಾ [ಬೊಮ್ಮ-ಬ್ರಹ್ಮ] ಅಮುಗೆ ರಾಯಮ್ಮನ ವಚನ. ಎಲ್ಲರೂ ವಚನ ಓ...
ಎಮ್ಮ ನಲ್ಲನ ಕೂಡಿದ ಕೂಟ ಇದಿರಿಗೆ ಹೇಳಬಾರದವ್ವಾ ನೀವೆಲ್ಲಾ ನಿಮ್ಮ ನಲ್ಲನ ಕೂಡಿದ ಸುಖವ ಬಲ್ಲಂತೆ ಹೇಳಿ ಉರಿಲಿಂಗದೇವ ಬಂದು ನಿರಿಗೆಯ ಸೆರಗ ಸಡಿಲಿಸಲೊಡನೆ ನಾನೋ ತಾನೋ ಏನೆಂದರಿಯೆನು ಉರಿಲಿಂಗದೇವನ ವಚನ. ತಾನೇ ಹೆಣ್ಣಾಗಿ, ದೈವ ತನ್ನ ಪ್ರಿಯನಾಗಿ ...
ಎನ್ನೊಡಲಾದಡೆ ಎನ್ನಿಚ್ಚೆಯಲ್ಲಿರದೆ ನಿನ್ನೊಡಲಾದಡೆ ನಿನ್ನಿಚ್ಛೆಯಲ್ಲಿರದೆ ಅದು ಎನ್ನೊಡಲೂ ಅಲ್ಲ ನಿನ್ನೊಡಲೂ ಅಲ್ಲ ಅದು ನೀ ಮಾಡಿದ ಜಗದ ಬಿನ್ನಾಣದೊಡಲು ಕಾಣಾ ರಾಮನಾಥ ಜೇಡರ ದಾಸಿಮಯ್ಯನ ವಚನ. ಇದು ನನ್ನ ಮೈಯಾದರೆ ನನ್ನ ಮಾತು ಕೇಳಬೇಕು, ಕೇಳುತ್ತ...









