
ಕನಿಷ್ಟದಲ್ಲಿ ಹುಟ್ಟಿದೆ. ಉತ್ತಮದಲ್ಲಿ ಬೆಳೆದೆ. ಸತ್ಯಶರಣರ ಪಾದವಿಡಿದೆ. ಆ ಶರಣರ ಪಾದವಿಡಿದು ಗುರುವ ಕಂಡೆ. ಲಿಂಗವ ಕಂಡೆ. ಜಂಗಮವ ಕಂಡೆ. ಪ್ರಸಾದವ ಕಂಡೆ. ಪಾದೋದಕವ ಕಂಡೆ. ಇಂತಿವರ ಕಂಡೆನ್ನ ಕಂಗಳ ಮುಂದಣ ಕತ್ತಲೆ ಹರಿಯಿತ್ತು. ಕಂಗಳ ಮುಂದಣ ...
ಅಯ್ಯ ನಾನು ಬಂದ ಭವಾಂತರದಲ್ಲಿ ನೀವು ಕಡೆ ಹಾಯಿಸಿದಿರೆಂಬುದನರಿಯೆ. ಕಂಗಳಿಗೆ ಕನ್ನಡಿಯ ತೋರಿದರು. ನಿಮ್ಮ ಕಾಣದೆ ಇದ್ದೆನಯ್ಯ. ಅದು ಕಾರಣದಿಂದ ಮನಕೆ ಪ್ರಾಣವಾಗಿ ಬಂದು ನಿಂದಿರಿ. ತನುವಿಂಗೆ ರೂಪಾಗಿ ಬಂದು ಸುಳಿದಿರಿ. ನಿಮ್ಮ ಸುಳುಹ ಕಾಣಲೊಡನೆ ಎನ...
ಪೃಥ್ವಿಯನೆ ಆದಿಯ ಮಾಡಿ, ಅಪ್ಪುವಿನಲ್ಲಿ ಗೋಡೆಯನಿಕ್ಕಿ, ಅಗ್ನಿಯನೆ ಅಪ್ಪುವಿನೊಳಗೆ ಹುದುಗಿಸಿ, ಅಗ್ನಿಯನೆ ಬೀಸಿ, ವಾಯುವನೆ ಬೀರಿ, ಆಕಾಶವನೆ ಹೊದಿಸಿ, ಸಹಸ್ರದಳ ಕಮಲವನೆ ಮೇಲು ಕಟ್ಟಕಟ್ಟಿ, ಬಯಲಮಂಟಪವ ಶೃಂಗಾರವ ಮಾಡಿ, ಒಡೆಯನಾಭರಣವ ಹಾರುತಿದ್ದೆನ...
ಏನೇನು ಇಲ್ಲದಾಗ ನೀವಿಲ್ಲದಿದ್ದರೆ, ನಾನಾಗಬಲ್ಲೆನೇ ಅಯ್ಯ? ಆದಿಅನಾದಿ ಇಲ್ಲದಂದು ನೀವಿಲ್ಲದಿದ್ದರೆ, ನಾನಾಗಬಲ್ಲೆನೇ ಅಯ್ಯ? ಮುಳುಗಿ ಹೋದವರ ತೆಗೆದುಕೊಂಡು ನಿಮ್ಮ ತೊತ್ತಿನ ತೊತ್ತಿನ ಪಡಿದೊತ್ತಿನ ಮಗಳೆಂದು, ರಕ್ಷಣೆಯ ಮಾಡಿದ ಶಿಸುವಾದ ಕಾರಣ ಹಡಪದ...
ಬಸವಣ್ಣ, ಚನ್ನಬಸವಣ್ಣ, ಮಡಿವಾಳಯ್ಯ, ಅಲ್ಲಮಪ್ರಭು, ಚನ್ನಮಲ್ಲೇಶ್ವರ, ಹಡಪದಪ್ಪಣ್ಣ, ತಮ್ಮೆಲ್ಲರ ತೊತ್ತಿನ ತೊತ್ತಿನ ಪಡಿದೊತ್ತಿನ ಮಗಳೆಂದು ಹೊತ್ತುಹೊತ್ತಿಗೆ ಎಚ್ಚರವ ಪಾಲಿಸಿ ರಕ್ಷಣೆಯ ಮಾಡಿದ ಕಾರಣದಿಂದ ತಮ್ಮೆಲ್ಲರ ಪಾದದಲ್ಲಿಯೆ ನಿಜಮುಕ್ತಳಾದೆ...
ತನುವೆಂಬ ಹುತ್ತಕ್ಕೆ ಮನವೆಂಬ ಸರ್ಪ ಆವರಿಸಿ ಹೆಡೆ ಎತ್ತಿ ಆಡುತಿರಲು, ಆ ಸರ್ಪನ ಕಂಡು ನಾ ಹೆದರಿಕೊಂಡು, ಗುರುಕರುಣವೆಂಬ ಪರುಷವ ತಂದು ಮುಟ್ಟಿಸಲು, ನೋಟ ನಿಂದಿತ್ತು, ಹೆಡೆ ಅಡಗಿತ್ತು, ಗುರು ಕರುಣವೆಂಬ ಪರುಷವೆ ನಿಂದಿತ್ತು. ನಿಂದ ಪರುಷವೆನ ಕೊಂಡ...
ತನ್ನ ತಾನರಿಯದೆ ಅನ್ಯರಿಗೆ ಬೋಧೆಯ ಹೇಳುವ ಕುನ್ನಿಗಳೇ ನೀವು ಕೇಳಿರೋ. ಅವರ ಬಾಳುವೆ ಎಂತೆಂದರೆ, ಕುರುಡ ಕನ್ನಡಿಯ ಹಿಡಿದಂತೆ, ತನ್ನೊಳಗೆ ಮರೆದು, ಇದಿರಿಂಗೆ ಬೋಧೆಯ ಹೇಳಿ, ಉದರವ ಹೊರೆವ ಛೀಮಾರಿಗಳೆಲ್ಲರು ಹಿರಿಯರೆ? ಆಲ್ಲಲ್ಲ. ಇದ ಮೆಚ್ಚುವರು ನಮ್...
ಕಂಡಿಹೆ ಕೇಳಿಹೆನೆಂದು ಮುಂದುಗಾಣದೆ, ಸಂದೇಹದಲ್ಲಿ ಮುಳುಗಿ ಕಳವಳಿಸಿ ಕಾತರಿಸುವ ಅಣ್ಣಗಳಿರಾ, ನೀವು ಕೇಳಿರೋ, ಹೇಳಿಹೆನು. ಕಾಣಬಾರದ ಘನವ ಹೇಳಬಾರದಾರಿಗೆಯು. ಹೇಳುವುದಕ್ಕೆ ನುಡಿ ಇಲ್ಲ. ನೋಡುವುದುದಕ್ಕೆ ರೂಪಿನ ತೆರಹಿಲ್ಲ. ಇಂತಾ ನಿರೂಪದ ಮಹಾ ಘನದ...
ನಾನೊಂದು ಹಾಳೂರಿಗೆ ಹೋದರೆ, ಅಲ್ಲಿ ನಾಯಿಗಳು ಅಟ್ಟಿಕೊಂಡು ಬಂದವು. ಹುಲಿಕರಡಿ ಅಡ್ಡಲಾದವು. ಇವ ಕಂಡು ನಾ ಹೆದರಿಕೊಂಡು, ನನ್ನ ಕೈಗೊಂದು ಕಲ್ಲು ತಕ್ಕೊಂಡು ನೋಡುತ್ತ ಬರುತಿರಲು, ಆ ನಾಯಿಗಳು ಓಡಿದವು. ಹುಲಿಕರಡಿಗಳೂ ಅಲ್ಲಿಯೇ ಬಯಲಾದವು. ಆ ಊರು ನಿ...
ಬೈಲು ಬಯಲಲ್ಲಿ ಒಂದು ಮೃಗವು ಹುಟ್ಟಿತ್ತು. ಅದ ಕಂಡಹೆನೆಂಬರಿಗೆ ಕಾಣಬಾರದು. ಹೆಳಿಹೆನೆಂಬರಿಗೆ ಹೇಳಬಾರದು. ಅದು ಚಿದ್ರೂಪ ಚಿನ್ಮಯವು. ಅದು ಗೊತ್ತ ಮೆಟ್ಟಿ ಆಡುವದನರಿಯದೆ, ಕತ್ತಲೆಯಲ್ಲಿ ಮುಳುಗಿ ಕಾಮನ ಬಾಧೆಗೆ ಶಿಲ್ಕಿ ಎತ್ತಲೆಂದರಿಯದೆ, ಭವಬಂದನದ...







