
ಇಂದ್ರಗಿರಿಯ ನೆತ್ತಿಯಲ್ಲಿ ನಿಂತ ಮಹಾಮಾನವ ನೀಡು ನಮಗೆ ನಮ್ಮೊಳಗನು ಕಂಡುಕೊಳುವ ಧ್ಯಾನವ ಹೌದು ನೀನೇ ಮಹಾಬಲಿ, ಹೆಣ್ಣು ಹೊನ್ನು ಗೆದ್ದೆ ನಿಜದ ಬೆಳಕ ಕಾಣಬಯಸಿ ನಿದ್ದೆಯಿಂದ ಎದ್ದೆ ; ಕಾಳಗದಲಿ ಗೆದ್ದೆ ನಿಜ, ಅದಕಿಂತಲು ಮಿಗಿಲು ಗದ್ದೆ ನೀನು ನಿನ್...
ಇತಿಹಾಸಕು ಹಿಂದೆಯೇ ಹೊತ್ತಿ ಉರಿದ ಜ್ಯೋತಿಯೇ ಹಸಿದ ವರ್ತಮಾನಕೆ ಹಾಲುಣಿಸುವ ಮಾತೆಯೇ ಬರಲಿರುವ ನಾಳೆಗೂ ಭರವಸೆಯಾ ಹಸಿರೇ ರಾಮನು ಬರೀ ಹೆಸರೇ, ಅಲ್ಲವೆ ನಮ್ಮುಸಿರೇ? ಬೆಳೆವ ಮರದ ಸತ್ವ ಮೊಳಕೆಯಲ್ಲೆ ಕಾಣದೆ? ಋಷಿ ಯಜ್ಞವ ಬಾಲಕ ರಕ್ಷಿಸುವುದು ಸಾಲದೆ?...
ಹೊಸ ಸಹಸ್ರಮಾನಕೆ ಪ್ರೀತಿಯ ಸುಸ್ವಾಗತ ಆರತಿ ಎತ್ತಿದೆ ವಿಶ್ವದ ಕಲ್ಯಾಣಕೆ ಭಾರತ ಶ್ರುತಿನುಡಿಸಲಿ ಈ ವರ್ಷ ಶತಮಾನದ ಚಲನೆಗೆ, ಸತ್ಯ ಸಹನೆ ಅಹಿಂಸೆಗಳ ತವರು ಮನೆಯ ಹಾಡಿಗೆ ಆಧ್ಯಾತ್ಮದ ಮೂರ್ತಿ ಹೊತ್ತ ವಿಜ್ಞಾನದ ರಥಕೆ ತಡೆಯಿಲ್ಲದ ನಡೆ ಒದಗಲಿ ಶಿವ ಸ...
ಎಂದಿಗಾದೀತು ಈ ದೇಶ ಎಲ್ಲರಂತೆ ತಾನೂ? ಎಂದಿಗಾದೀತು ಇರದಂತೆ ತರತಮ ಏನೇನೂ? ಜನಮನಗಳ ನಡುವೆ-ಗೋಡೆ ಎಂದಿಗೆ ಉರುಳುವುವು? ಬಡವರ ಇರುಳುಗಳು-ಎಂದಿಗೆ ಪೂರಾ ಕರಗುವುವು? ಸೆರೆಯೊಳಿರುವ ಲಕ್ಷ್ಮಿ-ದೀನರ ಕಡೆ ಹೊರಳುವಳೆಂದು? ಗಾಳಿ ಬಿಸಿಲಿನಂತೆ – ...
ಜಾತಿಯ ಉರಿಯಾರಲಿ ಕೋಪದ ಧಗೆ ತೀರಲಿ ಧಗಧಗಿಸುವ ದ್ವೇಷದ ಜ್ವಾಲೆ ನಂದಿಹೋಗಲಿ; ತಂಪು ಬೆಳಕ ಚೆಲ್ಲುವ ಚಂದ್ರ ಮೇಲಕೇರಲಿ ಮಕ್ಕಳೆಲ್ಲ ಮನಸು ಕಲೆತು ಮುಂದೆ ಸುಖದಿ ಬಾಳಲಿ. ವಿದ್ಯೆಯೆಂಬ ಗಂಗೆಯಲ್ಲಿ ಮೀಯಲೆಲ್ಲ ಮಕ್ಕಳು, ಸಹನೆಯೆಂಬ ಸುಧೆಯುಣಿಸಲಿ ಜ್ಞಾ...
ಯಾರ ಬಳಸಿ ನಿಂತಿರುವನೊ ನನ್ನ ಹೆಸರಿನಲ್ಲಿ ಅಳುತಿರುವನು ಸಿಲುಕಿ ಅವನು ಈ ಕೂಪದಲ್ಲಿ ಹಗಲಿರುಳೂ ಮನಸುರಿದು ಗೋಡೆಯೊಂದ ಸುತ್ತಲೂ ಕಟ್ಟುತಿರುವ ಚಕ್ರಬಂಧ ಮುಟ್ಟುತ್ತಿದೆ ಮುಗಿಲು ಗೋಡೆ ನಡುವೆ ತರೆಯುತಿರುವ ಕಾಳತಿಮಿರ ಕೂಪ ಮೆಲು ಮೆಲ್ಲನೆ ನುಂಗುತ್ತ...
ಯಾರೋ ಬೇಡುವ ಯಾರೋ ಹಾಡುವ ಬೆರೆಯದ ವಾಣಿಗಳು, ಯಾರೋ ಮುಗಿಲಲಿ ಯಾರೊ ಕಣಿವೆಯಲಿ ಹೊಂದದ ಚಿತ್ರಗಳು! ತಿನ್ನಲಾರದೆ ಅನ್ನವ ಮೋರಿಗೆ ತೂರುವ ಹಸ್ತಗಳು, ಮಣ್ಣಿನ ಜೊತೆ ಬೆರತನ್ನವೆ ಎಷ್ಟೋ ಒಡಲಿಗೆ ವಸ್ತುಗಳು, ಚಿನ್ನದ ಭಾರಕೆ ತಾರಾಡುವ ಮೈ ಸರಿಯುವ ಠೀವಿ...
ಪ್ರಭೂ ಈ ಬಾಳಿನಲ್ಲಿ ನನ್ನದೇನಿದೆ? ಎಲ್ಲ ನೀನೆ ನೀಡಿದ ಕೃಪೆಗಳಾಗಿವೆ. ಬಾಳಿಗೊಂದು ಪಾಯವಾಗಿ ಸಿಕ್ಕ ಮನೆತನ ಸುತ್ತ ಎದ್ದ ಬೇಲಿ ಬಳ್ಳಿ ಮಣ್ಣ ಕಣ ಕಣ, ಆಗ ಈಗ ಭೇಟಿಕೊಟ್ಟ ನಾಲ್ಕು ಮಳೆ ಹನಿ ಬಿಸಿಲ ತಾಪದಲ್ಲಿ ಉಳಿದು ಬಂದ ಬೆಳೆ ಹನಿ. ಪಡೆದ ಪತ್ನಿ ...
ದೀನ ನೀನು ಹೇಗೆ ಮಹಾಮಾನಿಯೇ? ನಾವೇ ಋಣಿ ನಿನಗೆ ಹಿರಿಯ ದಾನಿಯೇ ಚಳಿ ಬಿಸಿಲಿನ ಪರಿವೆಯಿರದೆ ನಮ್ಮ ಮನೆಯ ಕಟ್ಟಿದೆ, ಮಳೆಯಲಿ ಬರಿಮೈಲಿ ದುಡಿದು ನಮ್ಮ ಮಾನ ಮುಚ್ಚಿದೆ, ಹಿಡಿ ತಂಗಳು ತಿಂದು ಮನೆಯ ಹಿತ್ತಿಲಲ್ಲಿ ಮಲಗಿದೆ, ತಾಯಿಯಂತೆ ಬಾಯಿ ಮುಚ್ಚಿ ನ...
ಪ್ರತಿ ಹೂವೂ ಸಾರುತ್ತಿದೆ ಭಗವಂತನ ಚೆಲುವ ಪ್ರತಿ ಬೆಳಗೂ ಹಾಡುತ್ತಿದೆ ಭಗವಂತನ ಒಲವ ಹರಿವ ನೀರು, ಸುಳಿವ ಗಾಳಿ ತಿರುಗುವ ಋತು ಚಕ್ರ ಮಾತಿಲ್ಲದೆ ಸೂಚಿಸುತಿವೆ ಭಗವಂತನ ನಿಲುವ. ಕೋಟಿ ತಾರೆ ಬಾನಿನಲ್ಲಿ, ಭೂಮಿಯೊಂದು ಚಿಕ್ಕಿ ನೀಲಿಬಾನಿನಲ್ಲಿ ಸುಳಿದ...







