`Who breaks a butterfly upon a wheel?’ -Pope ಚಳಿಗೆ ಕಾತರಗೊಂಡು ರಾಜವೀಧಿಯಲಲೆದು ನೆಲಕಂಟಗೊಂಡ ಬಣ್ಣದ ಚಿಟ್ಟೆಯ ನಸುಕಿನಲಿ ನೋಡಿದೆನು,- ಬಂಡಿಗಾಲಿಯದುರುಳಿ ಕೊಲಲದನು ಮಾಡಿ ಮೂರಾಬಟ್ಟೆಯ. ಬಣ್ಣ ಬಣ್ಣದ ಪಕ್ಕಗಳನು ಮಣ್ಣಾಗಿಸಿದ ನರ...

ಹೋಗಿ ಬರುವೆನು ನನ್ನ ಎಳೆಗನಸುಗಳೆ! ನಿಮ್ಮ ತಳಿರ್‍ಗೆಂಪು ಹೂಗಂಪು ತಂಗಾಳಿ ಮುಗಿದು ಸಮರವನು ಸಾರಿಹುದು ಅಮರ ಶಕ್ತಿಯದೊಂದು, ಎದೆಮನವ ತಣಿಸಿರುವ ದಿನಗಳನೆ ಹುಗಿದು! ನಿಂತಿರುವದೆದುರಾಳಿಯಾಗಿ ನನಸಿನ ಕಹಿಯು, ಪ್ರಾಣಗಳ ಗಂಟೆಯನು ಗಣಗಣನೆ ಬಡಿದು; ಪಾ...

ಕೋಳಿ ಕೂಗಿ ನಸುಕನೆಚ್ಚರಿಸುವ ಮುನ್ನ, ಹೊಂಗದಿರನೆದ್ದು ವಸುಧೆಯ ನೋಡಿ ನಗುವ ಮುನ್ನ, ಹಗಲ ಮುಗಿಲುಗನಸಿನಲಿ ಬೆಂಗದಿರ ಮಾಯವಾಗುವ ಮುನ್ನ, ನನ್ನ ಕಿಟಕಿಯ ಬಳಿ ರೆಂಬೆಯ ಮೇಲೆ ಕುಳಿತು ಕೊಂಬು ಹಿಡಿದಿತ್ತು ಕೋಗಿಲೆಯೊಂದು ನಿದ್ದೆ ತೊಲಗಿತು; ಕಿವಿ ಸೋತ...