
ದ್ರೋಹವಲಾ ತಮ್ಮ ಬಾಲ್ಯವನೋದಿನೊಳೇರಿಸಿದ ಮನುಜ ಸಹಸ್ರಾಬ್ಧ ಬಾಳುತುಳಿದ ಜೀವಿಗಳ ಬಾಳಿಸು ವ ಹಲಸು ಮಾವಿನಂದದ ಗಿಡಕೊಂದು ದಶಕದ ಬಾಲ್ಯವನು ಸಹಿಸದದನು ತರತರದ ಕಶಿಯೊಳವಸರದಿ ಹರಿಸುವುದು ಬಹು ಕಾಲವೃದ್ಧಿಯೊಳಪ್ಪ ಮೋಪಿಂಗು ಕಾಸಿನ ಕಶಿಯಿಕ್ಕುವುದು ...
ಬೀಜ ವೃಕ್ಷ ನ್ಯಾಯವದಂತಿರಲಿ ಅನ್ಯಾಯವದಾವ ಬೀಜಕುಂ ವೃಕ್ಷಕುಂ ಆಗದಿರಲಿ, ರಾಶಿ ಬೀಜವಿದ್ಯಾಕೆನುತ ಕೋಜ ಬೀಜ ಬೆಳೆಸುವಾಧುನಿಕ ಕೃಷಿ ಬಾಳದಿರಲಿ ಯೋಜನೆಗಳಂತಿಮದಿ ಕೃಷಿ ಹೆಸರಿನೊಳಾ ಪೂಜ್ಯ ಬದುಕಿನೊಸರನಾರಿಸದಿರಲಿ – ವಿಜ್ಞಾನೇಶ್ವರಾ *****...
ಎಮ್ಮ ಪದ ಸಂಪ್ರದವಾದೊಡೆಮ್ಮ ಜೀವನ ಕ ಸೀಮ ಸಿರಿ ಸಂಪದ ಚಯನ ಬೇಕಿಲ್ಲವೆನು ತೆಮ್ಮ ಪಿರಿಯರಂದದ ಕೃಷಿಯನುಸುರಿದರು ಕಮತದೊಳೊಸರುವ ಬೆವರಿನೊಳಮ್ಮನರ್ಚನೆ ಮಾಡಿ ತಮ್ಮನ್ನದಾರ್‍ಜನೆಯ ದೋಷ ಕಳೆಯುತ ಬೆಳೆದಿಹರು – ವಿಜ್ಞಾನೇಶ್ವರಾ *****...
ಕೃಷಿ ಕ್ಷಮತೆ ಏರಿಹುದೆಂದು ಇಳುವರಿಯನಧಿ ಕಗೊಳಿಸಿದ ಖುಷಿಯಲೊರಲುವರೊಂದಷ್ಟು ಜನರಾದೊಡಂ ಕೃಷಿ ವೆಚ್ಚವೇರಿರಲು ಕ್ಷಮತೆಯ ಮಾತೆಲ್ಲಿಹುದು? ಕ್ಷಮತೆಯಳೆಯಲು ಕೋಷ್ಠ ಮಾಪನದ ಹಂಗ್ಯಾಕೋ? ಕೆಳಗಿಳಿದ ಜಲಮಟ್ಟವೇರಿರುವುಷ್ಣತೆಯಷ್ಟೆ ಸಾಕೋ – ವಿಜ್ಞಾ...
ಒರೆಯುವೊಡೆ, ಬರೆಯುವೊಡೆ ಸಾಲದದು ಕೃಷಿಯ ಕುರಿತೋದಿದೊಡೆ. ಮಾಡದೋದಿದ ಮಂಡೆ ಬರಿ ಗೂಡೆ ಕೊರಡ ನೆಟ್ಟು ನೀರೆರೆದೊಡದು ಮರವಪ್ಪುದುಂಟೇ? ಸೂರ್‍ಯ ಸಂಶ್ಲೇಷಣೆಯ ಕಷ್ಟವನಿಷ್ಟದೊಳನುಭವಿಪ ಬರಿ ಹುಲ್ಲನೀಕ್ಷಿಸಲದುವೆ ಕೃಷಿ ಪಾಠವನೊರೆಗು – ವಿಜ್ಞಾನ...
ಬಟ್ಟೆಯದೆಷ್ಟು ಸುಂದರವಾದೊಡಂ ತೊಟ್ಟ ಮಾರನೆಯ ದಿನಕದು ಹಳತು ನೆಟ್ಟ ಸಸಿಯದು, ಸವಿಯ ಫಲವದು ಸೃಷ್ಟಿಯೊಳನುದಿನವು ಹೊಸತು ಕಷ್ಟ ಕೃಷಿಯೆನುತಾರಿಗೋ ಬಿಟ್ಟ ಬಾಳೆಲ್ಲ ಹಳತು – ವಿಜ್ಞಾನೇಶ್ವರಾ *****...
ಕೃಷಿಯೆಂದು ತೆಂಗನು ನೆಟ್ಟೊಡದನೊಣಗಿಸುತ ಕೊಬ್ಬರಿ ಮಾಡಿ ಹಿಂಡಿದೆಣ್ಣೆಯ ಬಳಸಲು ಬೇಕು ಕೊಂಡುಣುವ ಕುಪ್ಪಿಯೊಳಿಹುದು ಕಲಬೆರಕೆಗಾಹ್ವಾನ ಖೊಟ್ಟಿಯುದ್ಯೋಗದೊಳು ಜೀವನವೆ ಕಲಬೆರಕಾಗಿರಲು ಕಸಬರಿಕೆಯೆಷ್ಟಿದ್ದೊಡಂ ಸಾಲದಾಗಿಹುದದನು ಗುಡಿಸಲು – ವಿ...
ದುಡಿದು ಗಳಿಸಿರ್‍ಪನ್ನ ಪಕ್ಕದೊಳಿರ್‍ದು ಬಡತನ ದೂರದೂರದ ಸೂರೆಯುದ್ಯೋಗಿಗೆಲ್ಲ ಸಿರಿತನ ದೈನ್ಯವಲಾ ಎಸೆದ ಬಿಸ್ಕತ್ತಿಗೆಳಸುವ ಶ್ವಾನ ದಂತೆಮ್ಮ ರೈತರ ಪಾಡು ದುಡ್ಡನಾಘ್ರಾಣಿಸುತಿರಲ್ ಧರೆ ಸತ್ತ್ವಗಳಂತೆ ಸೂರೆ ಹೋಗುತಿದೆ ಅಧಿಕ ಇಳುವರಿಗೆ – ವ...
ವೇದವನು ತೊರೆದವರು ಮತ್ತಾ ವೇದವನು ಓದುತೋದುತಲೊರೆವವರು ಅವರಿವರೆಲ್ಲರುಂ ಚೋದನೆಯಮಲಿನ ಪೇಟೆಯುದ್ಯೋಗಕೊಲಿದವರೆ ವೇದ ಮೂಲದಾರಣ್ಯಿಕದ ಕೃಷಿಯ ತೊರೆದವರೆ ವೇದನೆಯ ಕೃಷಿಗೆಲ್ಲರುಂ ಸೂತ್ರಧಾರಿಗಳೆ – ವಿಜ್ಞಾನೇಶ್ವರಾ *****...
ಕೃಷಿ ಎಂದರದೊಂದು ಮಕ್ಕಳಾಟದವೊಲಿರಲು ರಾಶಿ ನಿಯಮಗಳದನು ಬಾಧಿಸದಿರಲು ಉಸಿರಾಟದವೊಲೆಮ್ಮ ಜೀವನದೊಳಾ ಕೃಷಿ ಇರಲು ನಿಸರ್ಗದೊಳಿಂತಪ್ಪುದಕೆಲ್ಲ ಮೂಗ ತೂರಿಸಲು ಅಸ್ತಮದುಸಿರಾಟ ಪುಸ್ಸೊತ್ತು ಯಂತ್ರದೊಳು – ವಿಜ್ಞಾನೇಶ್ವರಾ *****...








