ಸಂಸಾರದಿಂದ ಸದ್ಗತಿಹೊಂದಿ

ಸಂಸಾರದಿಂದ ಸದ್ಗತಿಹೊಂದಿ ಹವಣವರಿತು ಮಾಯೆಯ ಜಯಸಿ ಮರಣ ಗೆಲಿದವನೇ ಶಿವಯೋಗಿ ||ಪ|| ಭವಭಾರ ಜಾಯ ಕರ್ಮಗಳನು ಬಯಸಿ ಬ್ಯಾರೆ ಬಯಲು ಬ್ರಹ್ಮದಿ ಬೆರೆತು ಬ್ರಹ್ಮಜ್ಞಾನ ದೊರೆವುತನಕ ತ್ರಿನಯನ ಆಶ್ರಯ ಹಿಡಿದು ಆವುದನರಿಯದೆ ಮುನ್ನಾ ಅನುವರಿತು...

ಪರಮಾನುಬೋಧೆಯೊ

ಪರಮಾನುಬೋಧೆಯೋ ಈ ಪರಮಾನುಬೋಧೆಯೋ ||ಪ|| ಸರಸಿಜ ಭವಗಿದು ಅರಕಿಲ್ಲದ ಪರಮಾನುಬೋಧೆಯೊ ||೧|| ಕಲಶಜಾಕೃತವನೆ ಈ ಬಲಯುತ ಛಲದಿ ನಿಲಯರೂಪ ||೨|| ಶಿಶುನಾಳಧೀಶನ ತಾ ಈ ಅಸಮ ಸ್ವರೂಪದ ಶಶಿಕಿರಣವೋ ||೩|| ****

ಬೋಧವಾದ ಮೇಲೆ ಜನರಪವಾದಕಂಜುವರೆ?

ಬೋಧವಾದ ಮೇಲೆ ಜನರಪವಾದಕಂಜುವರೆ? ಆದಿ ಅಂತ್ಯ ಆತ್ಮ ಆತ್ಮರುಭಯ ಬೇಧವಳಿದು ಸಾಧುಯೆನಿಸಿ ||ಪ|| ಕಾಲ ಕರ್ಮ ತುಳಿದು ತೂರ್ಯ ಜೋಲಿಯೊಳಗೆ ನುಡಿಯುತಿರಲು ಖೂಳಜನರು ಕೇಳಿ ಸಪ್ಪ ಕೀಳೋಣಾಗದೆನುತಿರಲು ||೧|| ಪರಮಗುರು ನಿರಾಲಹಸ್ತಾ ಶಿರದಮ್ಯಾಲ ಹರಿಯುತಿರಲು...

ಸಾಧುಗಳ ಸಹಜ ಪಥ

ಸಾಧುಗಳ ಸಹಜ ಪಥವಿದು ಆನಂದದಿಂದಿರುವುದು || ಪ || ಬೇಕು ಬ್ಯಾಡಾಯೆಂಬುದೆಲ್ಲಾ ಸಾಕುಮಾಡಿ ವಿಷಯ ನೂಕಿ ಲೋಕದೊಳು ಏಕವಾಗೆ ಮೂಕರಂತೆ ಚರಿಸುತಿಹರೋ || ೧ || ಎಲ್ಲಿ ಕುಳಿತರಲ್ಲೆ ದೃಷ್ಟಿ ಎಲ್ಲಿ ನಿಂತರಲ್ಲಿ ಲಕ್ಷ...

ಆರೂಢಾ ಈರೂಢಾ ಆರೂಢಾ ಯಾ ಆಲಿ

ಆರೂಢಾ ಈರೂಢಾ ಆರೂಢಾ ಯಾ ಆಲಿ ಪ್ರೌಢತನದಿ ಗುಂಡಾಡು ಹುಡುಗರೊಳು ಮೃಡ ನೀ ಪ್ರಭು ಆಡೋ ನಿರಂಜನ ||೧|| ಹಣುಮಂತಾ ಯೋಗಸಾ ಗುಣವಂತಾ ರಾಮಸಾ ಕಡಿದು ಕತ್ತಲದಿ ನಾ ಬಹಳ ವಿಚಾರದಿ ದಣಿದು ದಣಿದು...

ಹಾಯ್ಕುಗಳು

ನೋವು ನನ್ನೆದೆಯೊಳಗೆ... (ಮೊಳಗಿತು ಝೆನ್ ಹಾಯ್ಕುಗಳ ಝೇಂಕಾರ) ಓ! ಬುದ್ಧ ಮಸಣಕ್ಕೆ ಹೋಗುವ ಮೊದಲು ನಿನ್ನ ತತ್ತ್ವಗಳು ನಮಗೆ ಹಿಡಿಸಿದವು ಇರುವೆಗಳೇ ನೀವೇಕೆ ಹೋದಿರಿ ಅಲ್ಲಿ ! ಅದು ಮೇಣವೆಂದು ಗೊತ್ತಿಲ್ಲವೆ ? ನಿಟ್ಟಿಸುರು...

ಸಾಧುಗಳೆಲ್ಲಾ ಚನ್ನಾಗಿ ಕೇಳಿರಣ್ಣಾ

ಇನ್ನಾರಿಗೆ ಹೇಳಲೆಣ್ಣಾ ಸಾಧುಗಳೆಲ್ಲಾ ಚನ್ನಾಗಿ ಕೇಳಿರಣ್ಣಾ ||ಪ|| ನೆನ್ನೆ ಮೊನ್ನೆಯೆಂದು ತನ್ನೊಳಗೆ ತಾ ತಿಳಿದು ತನ್ನೇಸ್ಹುಣ್ಣಿವಿ ದಿನಾ ಕನ್ನೆಯಮಾಸಿ ಕೂಡಿ ಬಂದು ||ಅ.ಪ.|| ಹಾವು ಇಲ್ಲದ ಹುತ್ತಾ ಕಚ್ಚಲು ಸರ್ಪಾ ಜೀವ ಹೋದಿತು ಸತ್ತಾ...

ಸಾಧುಗಳಿಗಿದೆ ಸಾಧನವೋ ಸುಜ್ಞಾನವೋ

ಸಾಧುಗಳಿಗಿದೆ ಸಾಧನವೋ ಸುಜ್ಞಾನವೋ         ||ಪ|| ಪದುಮ ದಳದ ಮದವು ಬೆಳೆದು ಸದಮಲಾತ್ಮಯೋಗ ತುದಿಯ- ಲದನುಯೇರಿ ಮೆರೀದು ಬೆರಿದು ಕದಲದಂತೆ ಕರುಣ ರಸದ                           ||೧|| ಚಂದ್ರ ಸೂರ್ಯರೊಂದುಗೂಡಿದಾ ಅಲ್ಲೆ ಮೂಡಿದಾ ರಂಧ್ರದೂಳಗೆ ಹೊಳೆವ ಮಿಂಚು ಒಂದೇ...

ಶಿವಲೋಕದಿಂದ ಒಬ್ಬ ಸಾಧು ಬಂದಾನು

ಶಿವಲೋಕದಿಂದ ಒಬ್ಬ ಸಾಧು ಬಂದಾನು ಶಿವನಾಮವನ್ನು ಕೇಳಿ ಅಲ್ಲಿ ನಿಂತಾನು ||ಪ|| ಮೈತುಂಬ ಬೂದಿಯನ್ನು ಧರಿಸಿಕೊಂಡಾನು ಕೊರಳೊಳು ರುದ್ರಾಕ್ಷಿ ಕಟ್ಟಿಕೊಂಡಾನು ||೧|| ಮೈಯಲ್ಲಿ ಕಪನಿಯ ತೊಟ್ಟುಕೊಂಡಾನು ಕೈಯಲ್ಲಿ ತ್ರಿಶೂಲ ಹಿಡಿದುಕೊಂಡಾನು ||೨|| ಊರ ಹೊರಗೆ...