Home / Shekarapoorna

Browsing Tag: Shekarapoorna

  ಪ್ರಸ್ತಾವನೆಗೆ ಮುನ್ನ ಪದ್ಮಶ್ರೀ ಕಮಲಹಾಸನ್ ಶ್ರೇಷ್ಠ ಕಲಾವಿದ ಅಥವಾ ಅಲ್ಲ ಎಂಬ ಪ್ರಶ್ನೆ ನನಗೆ ಇತ್ತೀಚೆಗೆ ಅದೂ ಅವರು ಕತೆ ಬರೆದು ನಿರ್ಮಿಸಿರುವ `ದೇವರ್‌ಮಗನ್’ ಹಾಗೂ ಕತೆ, ಚಿತ್ರಕತೆ, ಸಂಭಾಷಣೆ, ಬರೆದು ನಿರ್ಮಿಸಿರುವ `ಮಹಾನದಿ...

‘ಕನ್ನಡ ಸಿನಿಮಾ’ ಕುರಿತಂತೆ ಬರೆಯಿರಿ ಎಂಬ ಆಹ್ವಾನ. ಬೇಕಿರಲಿ – ಬೇಡದಿರಲಿ ಇದೊಂದು ಪ್ರತ್ಯೇಕವಾದ ಪ್ರತ್ಯಯ ಎಂಬಂತೆ ಬಳಕೆಯಾಗುತ್ತಿದೆ. ‘ಕನ್ನಡ ಸಿನಿಮಾ’ ಕುರಿತಂತೆ ಬರೆಯುವಾಗ ಇದರ ನಿರ್ದಿಷ್ಟ ಗುಣಗಳು ಯಾವುವು ಎಂಬ ಪ್ರಶ್ನೆ ಎದುರಾದಾಗ...

ಆಫೀಸಿನಿಂದ ಮರಳಿ ಬಂದು ಸುಸ್ತಾಗಿ ರೂಮಿನಲ್ಲಿ ಮಂಚದ ಮೇಲೆ ಕುಳಿತು ಬೂಟುಗಳನ್ನು ಕಳಚಿ ಎದೆಯನ್ನು ಸೀಲಿಂಗ್ ಫ್ಯಾನಿಗೊಡ್ಡಿ ಸುಧಾರಿಸಿಕೊಳ್ಳುತ್ತಿದ್ದೆ. ನನ್ನಾಕೆ ಸೀತ ಕಾಫಿ ತಿಂಡಿಯೊಂದಿಗೆ ರೂಮಿಗೆ ಬಂದು ಸ್ಟೂಲಿನ ಮೇಲಿಟ್ಟು ಅಲ್ಲೇ ಇದ್ದ ಗೂಡಿ...

ಸಾವಿನ ಬಗೆಗಿನ ಪ್ರಜ್ಞೆಯನ್ನು ನಾವು ಬೆಳೆಸಿಕೊಳ್ಳಲನುವಾಗುತ್ತಿದ್ದಂತೆ ಅದು ಸೂಚನೆಯನ್ನೂ ಕೊಡದೆ ನಮ್ಮನ್ನು ಆವರಿಸುತ್ತದೆ. ಪ್ರಜ್ಞಾಪೂರ್ವಕವಾಗಿ ಅದನ್ನು ಸಂಧಿಸುವಾಗಿನ ಯಮಯಾತನೆಯನ್ನು ನಾನು ಕಲ್ಪನೆಯಲ್ಲೂ ಊಹಿಸಲಾರೆ. ಕಮಲತ್ತೆ ಈಗಲೋ ಆಗಲೋ ಎನ...

ಅವಳಿಗೆ ಒಂದು ಮಾತು ಹೇಳದೆ ಅಲ್ಲಿಂದ ಹೊರಡುವುದು ಸಭ್ಯತೆಯಲ್ಲ ಎನಿಸಿ ಯಾವುದಕ್ಕೂ ಒಂದು ಮಾತು ಹೇಳಿಯೆ ಹೊರಡುವ ಎಂದುಕೊಂಡು ಅವಳು ಇಳಿದುಕೊಂಡಿದ್ದ ಹೋಟೆಲ್ ಕಡೆಗೆ ಹೊರಟೆ. ಮೂರೇ ದಿನದ ಪರಿಚಯವಾದ್ದರಿಂದ ಅವಳಿಗೆ ವಿದಾಯ ಹೇಳಿಯೇ ಹೊರಡಬೇಕೆಂಬ ಆಸಕ...

“ನೀವೂನು ಯಾಕೆ ಜೊತೆಗೆ ಬರಬಾದು? ಸಂದರ್ಶನಕ್ಕೆ ಅಡ್ಡಿ ಇಲ್ದಂತೇನೆ ಮಾತಾಡ್ತ ಹೋಗೋಣ ಬನ್ನಿ….” ಎಂದು ಸೆನ್ ಹೇಳಿದಾಗ, ನನಗೂ ಆ ಕ್ಷಣಕ್ಕೆ ಮಾಡಲು ಬೇರೇನೂ ಕೆಲಸವಿಲ್ಲದ್ದರಿಂದ ಟೇಪ್‌ರಿಕಾರ್ಡರ್ ಆರಿಸಿ ‘ಎಲ್ಲಿಗೆ -ಏನೂ’ ಎಂ...

ಜೀವನದ ಗತದಲ್ಲೇ ಹೂತು ಹೋಗಿ ಗತಕ್ಕೆ ಮಾತ್ರ ಸೀಮಿತವಾದ ಹಲವಾರು ಸಂಬಂಧಗಳು ನೆನಪಿನ ಮೂಲಕ ಪ್ರಾಮುಖ್ಯ ಪಡೆದುಕೊಂಡು ಪ್ರಾಧಾನ್ಯ ಸ್ಥಾಪಿಸಿಕೊಳ್ಳುವ ಸಂದರ್ಭಗಳು ಅನೇಕ. ಅವುಗಳು ಪ್ರಸಕ್ತಕ್ಕೆ ಜೀವವಿಲ್ಲದ ಎಲುಬುಗೂಡಿನಂತೆ. ಶ್ರಾದ್ಧದಂತೆ, ಅಷ್ಟೆ....

ಇದು ನಡೆದುದು ಬಹಳ ವರ್ಷಗಳ ಹಿಂದೆ ಎಂದಾಗಲಿ ಅಥವ ತೀರಾ ಇತ್ತೀಚೆಗೆ ಎಂದಾಗಲಿ ಹೇಳುವಂತಿಲ್ಲ. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದ ಡಾ. ಎಂ ಎಂ ಕಲಬುರ್ಗಿಯವರು ನಿವೃತ್ತರಾಗುವ ಸ್ವಲ್ಪ ಮುಂಚೆ. ಚಲನ ಚಿತ್ರಗಳ ಕುರಿತಂತೆ ಒಂದು ವಿಚ...

“ಕಾಫಿಗೆ ಬತಿಯೇನೊ?” ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. “ಕಾಸಿಲ್ಲ ಕೊಡಿಸ್ತೀಯ?” “ಬಾ ಹೋಗೋಣ…” -ಹೊರಗಡೆ ಸಣ್ಣದಾಗಿ ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...