ಬರಲಿರುವ ಕಾಲದ ಯುವಕರೇ, ಇನ್ನೂ ಕಟ್ಟದಿರುವ ನಗರಗಳಲ್ಲಿ ಹುಟ್ಟದಿರುವ ಎಳೆಯ ಜೀವಗಳೇ, ಕ್ಷುದ್ರವಾಗಿ ಸತ್ತ ಈ ಮುದುಕನ ಮಾತನ್ನು ಕೇಳಿ. ತನ್ನ ಹೊಲವನ್ನು ಉತ್ತು ಬಿತ್ತದ ರೈತನಂತೆ. ಮನೆಯ ಚಾವಣಿಗೆ ತೊಲೆ ಕೂಡಿಸಿವುದನ್ನು ಅರ್‍ಧಕ್ಕೇ...
ಬಹಳ ಮುಖ್ಯವಾದ ಪತ್ರ ಹಿಡಿದು ಆಫೀಸಿಗೆ ಒಬ್ಬ ಓಡಿ ಬರುತಾನೆ. ಕಛೇರಿ ಅವಧಿ ಮುಗಿದು ಬಾಗಿಲು ಹಾಕಿರುತ್ತದೆ, ಹಾಗೆ, ಊರಿಗೆ ಪ್ರವಾಹದ ನೀರು ನುಗ್ಗುತ್ತಿದೆ ಎಂದೊಬ್ಬ ಸುದ್ಧಿತರುತಾನೆ. ಅವನ ಭಾಷೆ ಅವರಿಗೆ ತಿಳಿಯುವುದಿಲ್ಲ. ಹಾಗೆ...
ಇಬ್ಬರು ಕಳ್ಳರು ಊರನ್ನು ದೋಚಿದರು. ರೈತರ ಕತ್ತು ಮುರಿದರು. ಒಬ್ಬ ಹಸಿದ ತೋಳದಂತೆ ತೆಳ್ಳಗಿದ್ದ. ಇನ್ನೊಬ್ಬ ಜಗದ್ಗುರುವಿನಂತೆ ದಪ್ಪಗಿದ್ದ. ಇಬ್ಬರು ಕಳ್ಳರಲ್ಲಿ ಅಷ್ಟೇಕೆ ವ್ಯತ್ಯಾಸ? ಅವರಲ್ಲೊಬ್ಬ ಒಡೆಯ, ಇನ್ನೊಬ್ಬ ಗುಲಾಮ. ಒಡೆಯ ಕೆನೆಹಾಲು ಕುಡಿಯುತ್ತಿದ್ದ...
ಎಲ್ಲ ಮುಗಿದ ಮೇಲೆ ಅವಳನ್ನು ಮಣ್ಣಿಗಿಟ್ಟರು. ಹೂ ಬೆಳೆದವು, ಚಿಟ್ಟೆ ಹಾರಿದವು ಅಲ್ಲಿ. ಹೆಣ ಮಣ್ಣಿಗಿಟ್ಟಾಗ ಗುರುತು ಕೂಡ ಬೀಳಲಿಲ್ಲ. ಅಷ್ಟು ಹಗುರವಾಗಲು ಅವಳೆಷ್ಟು ನೋವು ತಿಂದಿದ್ದಳೋ! ***** ಮೂಲ: ಬೆರ್ಟಾಲ್ಟ್ ಬ್ರೆಖ್ಟ್ /...
ಹದುಳವಿಲ್ಲದ ಬದುಕು ಬಹಳ ಕಂಡಿದ್ದೇನೆ. ನಗು ನಗುತ್ತ ಹರಿವ ನದಿಯ ಉಸಿರು ಕಟ್ಟಿ ಒಣಗಿತ್ತು, ನಳನಳಿಸುವ ಎಲೆ ವ್ಯರ್ಥ ಉದುರಿ ಬಿದ್ದು ಒಣಗಿತ್ತು, ಹುಮ್ಮಸ್ಸಿನ ಮಣಕದ ಕಾಲು ಮುರಿದಿತ್ತು, ನಿಶ್ಚಲ ಮಧ್ಯಾಹ್ನದ ತೂಕಡಿಕೆಯಲ್ಲಿ ಪ್ರತಿಮೆ...
ಒರೆಸಿಬಿಡು ಬೇಕಾದರೆ ಗೋಳಿಡುವ ಈ ದುರ್ಬಲ ಬದುಕನ್ನು, ಬೋರ್ಡಿನ ಮೇಲೆ ಬರೆದ ಅಲ್ಪಾಯುಷಿ ಅಕ್ಷರಗಳನ್ನು ಡಸ್ಟರು ಸುಮ್ಮನೆ ಒರೆಸಿಬಿಡುವಂತೆ. ನಿನ್ನವರ್‍ತುಲಕ್ಕೆ ಮತ್ತೆ ಹೆಜ್ಜೆ ಇಡಲು ಕಾದಿದ್ದೇನೆ ನಾನು ಹೆಜ್ಜೆ ಇಟ್ಟು ನಡೆದು ಬಳಲಿದ ಹಾದಿಗಳೆಲ್ಲ...
ಕಡಲ ಉಪ್ಪು ನೀರಿನಲ್ಲುರುಳುರುಳಿ ಒರಟಾದ ಕಲ್ಲಿನಂತೆ, ಅಪಳಿಸುವ ಅಲೆಗೆ ಎದೆಯೊಡ್ಡಿ, ಬಂದೇ ಬರುವ ಚಳಿಗೆ ಮಳೆ ಗಾಳಿ ಬಿಸಿಲಿಗೆ ಸಾಕ್ಷಿಯಾಗಿ ಕಾಲದ ಕಟ್ಟು ಮೀರಿದ ಬಂಡೆಗಲ್ಲಿನಂತೆ ಸಹಜವಾಗಿ ಇದ್ದುಬಿಡಬಹುದಾಗಿತ್ತು. ಹಾಗೆ ಆಗಲಿಲ್ಲ. ತನ್ನ ಕುರಿತು,...
ಎಲೆ ಪ್ರಾಚೀನವೇ, ನನ್ನ ಮನತುಂಬುವಂತೆ ನಿನ್ನ ನಿನಾದ ಹೀರಿದ್ದೇನೆ. ಮೇಲೆ, ಮತ್ತೂ ಮೇಲಕ್ಕೆದ್ದು ಕೆಳಗೆ ಬೀಳುತ್ತ, ಮತ್ತೆ ಹಿಂದಕ್ಕೆ ಹೊರಳುವ ಹಸಿರು ನಾಲಗೆಯ ಮೊಳಗು ಕೇಳಿದ್ದೇನೆ ಸಹಸ್ರ ಜಿಹ್ವ. ದೂರ ವಸಂತದ ನನ್ನ ಮನೆ...