ನೆನ್ನೆಗಳ ಗಂಟು

ಅಲ್ಲೆಲ್ಲೊ ಸುತ್ತಿ ಗಂಟುಕಟ್ಟಿ ಮೂಲೆಗೆಸೆದಿದ್ದೆ ಆಗಂಟಿನೊಳಗಿತ್ತು ಒಂದಿಷ್ಟು ನೆನ್ನೆಗಳೂ ಲಜ್ಜೆಬಿಟ್ಟು ಗಂಡ್ಹುಡುಗಿಯಾಗಿದ್ದ ಮಂಗನಾಗಿ ಮರಕೋತಿಯಾಡಿದ್ದ ಹೆತ್ತವರ ಕಣ್‌ಸನ್ನೆಗಂಜದ ಮೋರೆ ತಿರುವಿನಕ್ಕ, ನಾಳೆಗಳ ನೆನೆಯದ ಒಂದಿಷ್ಟು ತವಕಿಸದ ಸವಿಗನಸುಗಳ ಬೆನ್ನೇರಿ ಹೊರಟಿದ್ದ ನೆನ್ನೆಗಳನ್ನೆಲ್ಲ ಗಂಟುಕಟ್ಟಿ ಎಸೆದಿದ್ದೆ...