ಕೊರವಂಜೀ ಹಾಡು

ಬಾಳಿಽಯ ಬನದಾಗ ಬಾಲ ಚೆಂಡಾಡ್ಯಾನ ಬಾ ನನ್ನ ಮಗನಽ ಅಬರಂಗ ಧೊರಿಯಽ ಬಾಳಿಕಿಂತಾ ಛೆಲಿವ್ಯೋ | ನನ ಸೊಸಿ | ಬಂದೊಮ್ಮೆ ಮಕದೋರೊ ||೧|| ಬಾಳಿಕಿಂತ ಛೆಲಿವ್ಯಾದ್ರ ಭಾಂಯಾಗ ನುಗಸವ್ವಾ ಉಟ್ಟೀದ ದಟ್ಟಿಽ ಕಳಕೋರ್ಹಡದವ್ವಾ...

ಸಬ್ಬಂಬು ರಾತೂರಿ

ಸಬ್ಬಂಬು ರಾತೂರಿ ಒಬ್ಬಕ್ಕಿ ನಾ ಇದ್ದ| ನೀವೆಲ್ಲಿ ಹೋಗಿ ಬಂದ್ರಿಽ| ನೀವೆಲ್ಲಿ ಆಡಿ ಬಂದ್ರಿಽ ||೧|| ಜಾಣಿ | ಬೆಟ್ಟಂಬು ಬ್ಯಾಸಗಿ| ಕಣ್ಣೀಗಿ ನಿದ್ದಿಲ್ಲ| ತನುಗಾಳಿಗ್ಹೋಗಿದ್ದೇವ| ತನುಗಾಳಿಗ್ಹೋಗಿದ್ದೇವ ||೨|| ಎದಿಯ ಮ್ಯಾಲಿನ ಘಾಯಿ ಎಳಿಯ...

ಹಣ್ಣ ಬಂದಾವ ಹಣ್ಣ

ಹಣ್ಣ ಬಂದಾವ ಹೆಣ್ಣಾ ಮಗಿಯ ಮಾವಿನಽ ಹಣ್ಣ ಜಾಣಿ|| ಹಣ್ಣ ಕೊಳತೇವ ಹಣ್ಣಿನ ಬಿಲಿವಯ ಹೇಳ ಜಾಣಿ ||೧|| ಬೆಲಿಯ ಹೇಳುಽವ ಜಾಣಾ ಮಲ್ಲಾಡ ದೇಶಕ್ಹೋಗಿದನಲ್ಲೋ ಜಾಣಾ || ತಿಳಿಯಲಾರಽದ ಬೆಲಿಯ ನಾ ಏನ್ಹೇಳಾಲೊ...

ವಾರಿ ರುಮ್ಮಾಲ ಸುತ್ತಿ

ವಾರಿ ರುಮ್ಮಲ ಸುತ್ತಿ ಓಣ್ಯಾಗ ನಿಂತಾನ| ಹ್ವಾರ್ಯಾನಿಲ್ಲೇನೊ| ಹೊಲದಾಗ ಹೊಲದಾಗ| ಹ್ವಾರ್ಯಾನಿಲ್ಲೇನೊ || ಹ್ವಾರ್ಯಾನಿಲ್ಲಽ ಏನೊ ಹೊಲದಾಗ ಚಂದರಾಮಾ| ನಾರ್ಯಾರಿಲ್ಲೇನೊ| ಮನಿಯಾಗ ಮನಿಯಾಗ| ನಾರ್ಯಾರಿಲ್ಲೇನೊ |೧| ಮಕಮಕ ಮಲ್ಲೀಗಿ ಅದರಾಗ ಖ್ಯಾದೀಗಿ| ಬಿಚ್ಚಿ ನೋಡಿದರ|...

ಎಡವೂರ ವೀರಭದ್ರನ ಸ್ತೋತ್ರ

ಎಡವೂರ ತಳದಲ್ಲಿ ಏನೇನ ಶಡಗರ ಎಡಕ ನಂದೀಕೋಲ ಬಲಕ ಪಲ್ಲಕಿ ಪಂಕ ಶಡಗರದ ಛತ್ತರಕಿ ಎಡಬಲ ಬತಾಗೀರಿ ಹಾರೂವ ಹೂಬಾಣ ಹೊಬತ್ತಿ ಕಂಡಿಽರಿ ಗುಗ್ಗಽಳದಾರೂತಿ ಗುಡಿಮುಂದ ಕಂಡಿಽರಿ ಶರಣಬಂದಯ್ಯಗ ಕರಣ ನೋಡಿ ಪೂಜಿಗೋಳ ಬನ್ನೆ...

ಫಂಢರಪುರದ ವಿಠೋಬನ ಸ್ತೋತ್ರ

ಇಟ್ಟೀಗಿ ಕಲ್ಲ ಮ್ಯಾಲ ಊರಿ ನಿಂತಾನೆರಡು ಪಾದ | ಜರದ ಮಂದೀಲ ಶಾಲ ಇಳಿಯ ಬಿಽಟ್ಟಾರ ಜೋಲ ನಾದ ಬ್ರಹ್ಮ ಮೇಘ ಶಾಮ ಸೃಷ್ಟಿ ಕರ್ತ ಸರ್ವ ಗೋಮ ಸಾದು ಸಂತಽರ ಪ್ರೇಮ ಹ್ಯಾಂಗ...

ಸೊಲ್ಲಾಪುರದ ಸಿದ್ಧರಾಮೇಶ್ವರ ಸ್ತೋತ್ರ

ಬಾಗಿಲದಾಗಿನ ಕೋಗಿಲ ಕೂಗಿ ಕೂಗಿ ಮರನೇರಿ | ನಾಗರ್‍ಹೆಡಿಯಂಗಾಡ್ಯಾವೇಳಯ್ಯಾ | ಸಿದ್ಧರಾಮಾ | ನಾಗರ್‍ಹೆಡಿಯುಗಾಡ್ಯಾವೇಳಯ್ಯಾ ||೧|| ಅತ್ತಿಽಯ ಮಽರನೇರಿ ಸತ್ತು ಸೊರಗಿ ನಾನೆ ಬಂದ | ಮುತ್ತಿನೊಸ್ತಾ, ತೋರ್‍ಯಾರೇಳಯ್ಯಾ | ಸಿದ್ಧರಾಮಾ | ಮುತ್ತಿ...

ಗಣಪತಿಯ ಸ್ತೋತ್ರ

ಗಂಧ ಕಸ್ತುರಿ ಪುನಗಽ | ಗೌರವ್ವನ | ಕಂದಗ ಧರಿಸಿದರಽ | ಅಂದದ ಬಿಳಿ‌ಎಲಿ ಆಡಕಿ ಕಾಚವು ಸುಣ್ಣ | ಮುಂದ ಮಡೆಚಿನಿಟ್ಟು ಮಲ್ಲಿಽಗಿ ಮಳೆಗರೆದ | ಮತಿಯ ಪಾಲಿಸೊ ಎನಗಽ | ಶ್ರೀಗಣರಾಯಾ...