
ನಕ್ಕರೆ ನಕ್ಕೇ ನಗುವದು, ಅತ್ತರೆ ಅತ್ತೇ ಅಳುವುದು-ಒಮ್ಮೊಮ್ಮೆ – ಆಡಿದರೆ ಆಡಿಯೇ ಆಡುವದು, ನೋಡಿದರೆ ನೋಡಿಯೇ ನೋಡುವುದು ಒಮ್ಮೊಮ್ಮೆ- ಹುಚ್ಚುಖೋಡಿ! ಮುದ್ದಿಡಹೋದರೆ ಬಿಕ್ಕಿಸಿ ಅಳುವುದು. ಗುದ್ದಲುಹೋದರೆ ಫಕ್ಕನೆ ನಗುವುದು. ಹುಚ್ಚುಖೋಡಿ! ...
ಕಂದಾ! ನಿನ್ನ ಮುಖದ ಮುದ್ರಾಕೃತಿಯು ನನ್ನಂತಿದೆ; ಆದರೆ ದೇಹದ ಭದ್ರಾಕೃತಿಯು ಅವರಂತಿದೆ. ಕಂದಾ! ನಿನ್ನ ಕಣೊಳಗಿನ ಕರುಣೆ ನನ್ನಂತಿದೆ; ಆದರೆ ನೋಟದೊಳಗಿನ ಸರಣಿ ಅವರಂತಿದೆ. ಕಂದಾ! ನಿನ್ನ ಗದ್ದದ ಮೇಲಣ ಕುಣಿಯು ನನ್ನಂತಿದೆ; ಆದರೆ ಮೂಗಿನ ಕೆಳಗಣ ಮಣ...














