ಅಂಬಿಕಾತನಯದತ್ತ (ದ ರಾ ಬೇಂದ್ರೆ)

ಒಳಹೊರಗೆ

ನನ್ನ ಪಾಡ ತೊಡುವಲ್ಲಿ- ದನಿ ಕುಗ್ಗಿತು, ಬಾತವು ಕಣ್ಣು; ನಿನ್ನ ನಾಡ ನೋಡುವಲ್ಲಿ- ಗಮಗಮ ಹೂ, ಸೀ-ಸವಿ ಹಣ್ಣು ಕೆಂಡ-ಬೆಂಕಿ ಕಂಡ ಅಲ್ಲಿ- ಬರಿ ಇದ್ದಿಲು, ಸುಟ್ಟಿಹ […]

ದೊಡ್ಡವರು

ದೊಡ್ಡವರದೆಲ್ಲವೂ ದೊಡ್ಡದೆಂಬುವ ಮಾತು ಸುಳ್ಳಲ್ಲ! ಶ್ರವಣ ಬೆಳಗುಳದಲ್ಲಿ ಒಂದು ಸಾ- ವಿರ ವರುಷ ನಿಂತ ಗೊಮ್ಮಟ! ವಿಜಯನಗರದ- ಲ್ಲಿರುವ ಸಾಸಿವೆ ಗಣಪ! ವಿಜಯಪುರದೊಳಗೀಗು ಆಡಿದ್ದ ನಾಡಾಡಿ ಏಳೇಳು […]

ನವಿಲು

ಕುಣಿ ಕುಣಿ, ನವಿಲೇ, ಕುಣೀ ಕುಣೀ ಬಿಸಿಲಿಗೆ ಬೇಯುತ ಬಾಯ್ ಬಿಡುತಿದೆ ಇಳೆ, ಕುದಿವುದು ಮೋಡವು, ತೊಟ್ಟಿಡದಿದೆ ಮಳೆ, ಬತ್ತಿತು ಹಳ್ಳವು, ಅತ್ತಿತು ತೊರೆಹೊಳೆ, ತಾಪವ ನೀ […]

ಜೀವ-ಜೀವವೇ

ಯಾರ ಬರುವ ಕಾಯುತಿರುವೆ? ಯಾರ ದೆಸೆಗೆ ನೋಯುತಿರುವೆ? ಯಾರಿಗಾಗಿ ಸಾಯುತಿರುವೆ? ಜೀವ ಜೀವವೇ! ದಿನಬೆಳಗೂ ನಿರುಕಿಸುವೆ, ದೆಸೆದೆಸೆಗೂ ಗಿರುಕಿಸುವೆ, ಮೊಗಮೊಗಗಳ ಪರಕಿಸುವೆ, ಜೀವ ಜೀವವೇ! ಕುಣಿವುದಾವ ಲಯಕೆ […]

ಹಾಡ-ಹುರುಳು

ಕವಿ:- ನನ್ನ ಹಾಡುಗಳನ್ನೆ ನೀನು ಕೇಳುತ ಕುಳಿತೆ, ನಿನ್ನ ಹಾಡನು ನಾನು ಕೇಳಲೆಂದು ಕುಳಿತೆ, ನನ್ನೀ ಹಿಗ್ಗು ಮರುದನಿಯ ಕೊಡುವಂತೆ ನಿನ್ನ ಕಣ್ಣಲಿ ಕಂಡೆ ಕುಣಿವುದೊಂದು. ರಸಿಕ:- […]

ಇಂದು

ಇಂದಿನರಸನಿಗೇಕೆ ನಾಳನಾಳುವ ಚಿಂತೆ? ಇಂದು ರಸವನು ಸವಿವುದವಗೆ ಸಾಜ. ಇಂದು ಮುಳುಗದೆ, ನಾಳೆ ಹೊತ್ತು ಮಾಡುವದೇನು? ಹೊತ್ತು ಮೂಡಲು, ಇಂದುಗಿಲ್ಲ ತೇಜ. ನಾಳಮೊಗವನು ಮುಸುಕದಿರಲಿಂದು, ಆ ನಿನ್ನೆ […]

ಅಮರ ಜೀವನ

ಮುತ್ತಲದ ನೆತ್ತರವ ಚಿಮ್ಮಿ ಚಿತ್ರಿಸುವ ಹೂ ಸುಗ್ಗಿಯೊಲುಮೆಯ ತಂದೆ ಅಂಚೆಗಾರ. ಅರಿತೊಂದು ಕುಡಿನೋಟ, ತಿಳಿದೊಂದು ಮುಗುಳುನಗೆ, ಬರುವ ಬೆಳಕಿನ ಬನದ ಸಂಚಕಾರ. ತನ್ನ ಸನ್ನಿಧಿಯಲ್ಲಿ ಜೀವಕೋಟಿಯಲೊಂದು ಜೀವ […]

ವನಸುಮ

ಹೆಸರಿಲ್ಲದಿಲ್ಲಿ ಎಸೆಯುವದು ಹೂವಿನ ಪಸರ. ಮರ ಮರದ ಮೆರೆದಾಟವಿರಲಿ ಸುತ್ತ; ಪಶುಗಳಾರ್‍ಭಟೆ, ಮೃಗದ ಎಡೆಯಾಟ, ಹುಳಹುಪ್ಪ- ಡಿಯ ಕಾಟ ನಡೆದಿರಲಿ ನೋಡಿದತ್ತ. ನೋಡುವರು, ನೋಡಿ ನಲಿದಾಡುವರು ಕೊಂಡು […]

ಏಕಾಕಿನೀ

ಕಣ್ಣುಮಸುಕು ಇರುವಾಗಲೇ ಅವಳು ಊರ ಹೊರಗಿನ ಬಾವಿಗೆ ನೀರಿಗೆ ಹೋದಳು. ಹಾದಿಯಲ್ಲಿ ಒಂದು ಮನೆಯ ಕಟ್ಟೆಯ ಮೇಲೆ ಒಬ್ಬ ಸಣ್ಣ ಹುಡುಗಿಯು ತನ್ನ ಚಿಕ್ಕ ತಮ್ಮನನ್ನು ಚಂದಪ್ಪನ […]

ಸತ್ಯವೀರ

ತೊಗಲ ನಾಲಗೆ ನಿಜವ ನುಡಿಯಲೆಣಿಸಿದರೆ, ತಾ- ನಂಗೈಲಿ ಪ್ರಾಣಿಗಳ ಹಿಡಿಯಬೇಕು. ಇಲ್ಲದಿರೆ ನೀರಿನೊಲು ತಣ್ಣಗಿದ್ದವನದನು ಉರಿಯ ನಾಲಗೆಯಿಂದ ನುಡಿಯಬೇಕು. ಸುಡುಗಾಡಿನಲಿ ಹುಡುಗ ಹೆಣವಾದರೇನು? ಕೈ- ಹಿಡಿದವಳು ಹೊಲೆಯನಾಳಾದರೇನು […]