ಯಾಕೆ? ಎಂದೆ ಕೇಳ್ವರೆಲ್ಲ
ನೋವ ಮರೆಸರು
ಎಂತು ಎಂದು ಮೂಗಮೇಲೆ
ಬೆರಳನಿಡುವರು
ಗುರುವೆ ನೀನು ಮಾತ್ರ ಎನಿತು
ಕೇಳಲಿಲ್ಲವು
‘ಪಾಪಿ, ಎಂದು ನಿನ್ನದಿಟ್ಟ
ತೊರೆಯಲಿಲ್ಲವು
ನಿನ್ನ ಮಮತೆ ನನ್ನ ಮೂಕ-
ನನ್ನು ಮಾಡಿದೆ
ಮನದ ಮುದುಡನೆಲ್ಲತಿದ್ದಿ
ರೂಪ ನೀಡಿದೆ
ಬರಲಿ ಬಿಡಲಿನೋವು ಗೆಲವು
ಸೌಖ್ಯವೆಲ್ಲವು
ಚಿಂತೆಗೈಯೆ ನಿನ್ನದೇನೆ
ನನ್ನದೆಲ್ಲವು
*****








