Home / ಕವನ / ಅನುವಾದ / ನನ್ನ ಮೇರಿ

ನನ್ನ ಮೇರಿ

ವರುಷವಿಪ್ಪತ್ತಾಯಿತೀಗ
ನಮ್ಮ ಗಗನವ ಮುಸುಕಿ ಮೇಘ,
ಆಹ, ಇನ್ನಿದೆ ಕಡೆಯದಾಗ,
ನನ್ನ, ಮೇರಿ!
ಕಾಣೆ ನಿನ್ನಲಿ ಮೊದಲ ಹಮ್ಮ,
ದಿನದಿನಕೆ ಬಲ ಕುಗ್ಗಿತಮ್ಮ,
ನನ್ನ ಕೊರಗೇ ಕೊರೆದುದಮ್ಮ,
ನನ್ನ ಮೇರಿ!
ನಿನ್ನ ಸೂಜಿಗಳೊಮ್ಮೆ ಹೊಳೆದು
ನನ್ನ ಕೆಲಸಕೆ ದುಡಿದು, ದುಡಿದು,
ಈಗ ಹೊಳೆಯವು ಮಣ್ಣು ಹಿಡಿದು,
ನನ್ನ ಮೇರಿ!
ಮಾಡಹೋಗುವೆ ಮರುಗಿ, ಇನ್ನು,
ಮೊದಲಿನಂತೆಯೆ ಕುರಿತುದನ್ನು-
ಮಾಡಗೊಡದು ನಿನ್ನ ಕಣ್ಣು,
ನನ್ನ ಮೇರಿ!
ಗರತಿ ನೀ ಮನೆಬದುಕ ನೋಡಿ,
ನೋಡಿನೆಳೆಗಳ ಮಾಟಮಾಡಿ
ನೆಯ್ದೆ ನನ್ನೀ ಎದೆಯ ಮೂಡಿ,
ನನ್ನ ಮೇರಿ!
ನಿನ್ನ ಮಾತೋ ತೊದಲುತಿಹುದು,
ಕನವರಿಕೆವೊಲು ಕಲಸಿ ಬಹುದು-
ನನ್ನ ಕಿವಿಗದೆ ಸೊಗಸ ತಹುದು,
ನನ್ನ ಮೇರಿ!
ನಿನ್ನ ಬೆಳ್ಳಿಯ ಕೂದಲಂದ
ನನ್ನ ಕಣ್ಣಿಗದೇನು ಚೆಂದ!
ಮೂಡ ಬೆಳ್ಳಿಯ ಥಳಕು, ಮಂದ,
ನನ್ನ ಮೇರಿ!
ಕಾಣದೀ ಸಿರಿದಲೆಯ ನಾನು
ನೋಡತಕ್ಕ ನೋಟವೇನು?
ಏಕೆ ತೊಳಗುವ ಸೂರ್ಯ ತಾನು,
ನನ್ನ ಮೇರಿ!
ಏಳಹೋಗಿ, ಉಸಿರುಹತ್ತಿ,
ಇಡುವೆ ಕೈಯಲಿ ಕೈಯನೆತ್ತಿ,
ಮೆಲ್ಲನೊತ್ತಲು ಮೆಲ್ಲನೆತ್ತಿ,
ನನ್ನ ಮೇರಿ!
ನಡೆವೆ, ಇಬ್ಬರು ಹಿಡಿದು, ಬಗ್ಗಿ,
ಹೆಜ್ಜೆ ಹೆಜ್ಜೆಗೆ ಜಗ್ಗಿ, ಜಗ್ಗಿ;
ಒಲುಮೆಯೊಂದೇ ಜಗ್ಗದೊಗ್ಗಿ
ನನ್ನ ಮೇರಿ!
ಕೇಡಿನಲಿ ಕಂಗೆಡದೆ ಒಲವು,
ಮುಪ್ಪಿನಲಿ ಚಳಿಗೊಳದೆ ಗೆಲವು,
ನಗುತಲಿಹುದೆ ನಿನ್ನ ಚೆಲುವು,
ನನ್ನ ಮೇರಿ!
ಆದರೇನಹ! ನಾನೆ ಬಲ್ಲೆ,
ಮತ್ತೆಮತ್ತೆನ್ನಳಲಿಗಲ್ಲೆ,
ಕಣ್ಣ ನಗೆ ಕುಡಿಮುರಿವುದಲ್ಲೆ,
ನನ್ನ ಮೇರಿ!
ನನ್ನ ಪಾಲಿಗೆ ಮುಂದೆ ನಡಗೆ
ಹಿಂದಿನಂತೆಯೇ ಬರೆದು ಮಡಗೆ,
ಬಿರಿಯದೇ ಎದೆ ನಿನಗೆ ಕಡೆಗೆ,
ನನ್ನ ಮೇರಿ!
*****
COWPER : My Mary
Tagged:

Leave a Reply

Your email address will not be published. Required fields are marked *

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...