ನನ್ನ ಎದೆಯ ಗೂಡಲ್ಲಿ
ಮಾತನಿರಿಸಿದ ಪ್ರೇಮಿ ನೀನು
ಪ್ರೀತಿಸುವೆ ಪ್ರೇಮಿಸುವೆ
ಎಂಬ ಮಾತಿನೆಳೆಯಲಿ
ಸೆರೆ ಸಿಕ್ಕ ರಾಧೆ ನಾನು ||ಪ್ರೀ||

ವಿರಹ ವೇದನೆಯಲಿ
ಹಗಲಿರುಳು ಕಾದಿರುವೆ
ನಿನಗಾಗಿ ನಾನು ಎನ್ನ ಮನವ
ತಿಳಿಯದೇ ಹೋದೆ ನೀನು ||ಪ್ರೀ||

ಬರಿದಾಗುವುದು ಬೃಂದಾವನ
ಕೊಳಲನಾದ ವಿಲ್ಲದೇ ||
ಹರಿಯುತಿಹಳು ಯಮುನೆ
ಕೆಳೆಯ ಭಾವವಿಲ್ಲದೆ ||ಪ್ರೀ||

ಭಾವನೆಗಳ ಒಲುಮೆಯಲಿ
ಹುಡುಗಿ ಕನ್ನಡಿಯಾದೆ ||
ಕಣ್ಣರೆಪ್ಪೆ ಮುಚ್ಚಿರಲು
ಮಾಧವ ನಿನ್ನ ಕಂಡೆ ||ಪ್ರೀ||

ಎಲ್ಲಿರುವೆ ಹೇಗಿರುವೆ
ಯಾರ ಕೂಗಿಗೆ ಮೊರೆ
ಹೋಗಿರುವೆ ಮುಕುಂದನೇ
ಗೊಂಬೆಯಾಟವಲ್ಲ ತಿಳಿ ನೀನು ಸುಮ್ಮನೇ ||ಪ್ರೀ||
*****

Latest posts by ಹಂಸಾ ಆರ್‍ (see all)