ಏನು ಬೇಕಾಗಿದೆ?
ಜೀವದಾಯಿ ನೆಲ, ಜಲ, ಗಾಳಿ, ಬೆಳಕು
ಚೇತೋಹಾರಿ ಬೆಟ್ಟ, ಗುಡ್ಡ, ಹಳ್ಳ, ಕೊಳ್ಳ, ಕಣಿವೆ
ಭಾವ, ಬದುಕು ತುಂಬುವ ಪ್ರಾಣಿ, ಪಕ್ಷಿ, ಕ್ರಿಮಿ, ಕೀಟ
ಸಂಜೀವಿನಿ ಸಸ್ಯರಾಶಿ
ಒಡನಾಡಲು ಪ್ರೀತಿಯ ಮಾನವ ಸಂಕುಲ
ಬೇಕಾದುದಿದೆ.
ಇರುವುದೆಲ್ಲಾ ಗೌಣಮಾಡಿ
ಇಲ್ಲದ್ದೇ ಧೇನಿಸುವ, ದೊಡ್ಡದು ಮಾಡಿ ಕೊರಗುವ
ಕಳೆದು ಕೊಳ್ಳುವ,
ಕಳೆದು ಹೋಗುವ
ಖಾಯಿಲೆ ಗೀಳಿಗೆ ಬೀಳದಿರಿ.
ನಿಸರ್ಗವನ್ನು ಅರಿತು ಬಳಸಿರಿ
ಕೂಡಿ, ದುಡಿದು ಉಣ್ಣಿರಿ
ಬದುಕುವ ಕಲೆಯ ಕಲಿಯಿರಿ;
ನಲಿಯಿರಿ.
*****