Day: December 20, 2019

ಹೊಂಚು

ಪ್ರೀತಿಪಾತ್ರರು ಸತ್ತಾಗೆಲ್ಲ ನನ್ನೊಳಗಿನ ಚೈತನ್ಯದ ಕಣವೊಂದು ಸುಟ್ಟು ಬೂದಿಯಾಗುತ್ತದೆ. ನನ್ನವನು ಮೈಮರೆತು ಮಲಗಿದ್ದರೂ ಕಳವಳಿಸುತ್ತಾ ಎದೆಬಡಿತ ಆಲಿಸುತ್ತೇನೆ. ನನಗನ್ನಿಸುತ್ತದೆ ಯಾರೋ ಹೊಂಚು ಹಾಕುತ್ತಿದ್ದಾರೆ ಬೆನ್ನಹಿಂದೆ.

ದೊಡ್ಡ ಗ್ವಾಲೆ

ಅದನ್ನೇ ಹಾಕಿಕೊಂಡು ಬಾ ಅಂತ ಗುಟ್ಟಾಗಿ ಕಿವಿಯಲ್ಲಿ ಹೇಳಿದ್ದು ನೋಡಿ ಸಂಭ್ರಮದಿಂದ ಹಾಕಿಕೊಂಡೆ, ನನ್ನ ಹೊಸ ವಜ್ರದ ಬೆಂಡೋಲೆ ಸಂಜೆ ಓಡಿ ಯಮುನಾ ತೀರಕ್ಕೆ ಹೋಗಿ ನೋಡಿದರೆ […]