ಹನಿಗವನಪರಿಹಾರನೊಂದು ಬೆಂದು ಮನೆಮಠವಿಲ್ಲದ ಜನರಿಂದು ಸರ್ಕಾರದ ಸಹಾಯ ಎಂದು ಬರುವುದೋ ಎಂದು ಪರಿಹಾರ ಧನ ಬರುವಾಗಲೇ ಸೋರಿ ಮುಕ್ಕಾಲು ನತದೃಷ್ಟರಿಗುಳಿಯುವುದು ಕಾಲುಪಾಲು *****...ಶ್ರೀವಿಜಯ ಹಾಸನAugust 21, 2022 Read More
ಹನಿಗವನಎಚ್ಚರ!ಸಾಹಿತ್ಯವೊಂದು ಸುಂದರ ಸಾಗರ ಮುತ್ತುರತ್ನ ಹವಳಗಳ ಆಗರ ಉಪ್ಪು ನೀರಿನ ಮಹಾಪೂರ ಮೊಸಳೆ ತಿಮಿಂಗಿಲಗಳಿವೆ ಎಚ್ಚರ! *****...ಶ್ರೀವಿಜಯ ಹಾಸನAugust 14, 2022 Read More
ಹನಿಗವನಕಳಕಳಿಅರ್ಧ ಸಂಬಳಕ್ಕೆ ಎಲ್ಲಾದರೂ ಸರಿ ಕೆಲಸ ಮಾಡುವೆವು, ವಿನಮ್ರ ಕಳಕಳಿ ಕೊಟ್ಟರಾಯಿತು ವೇತನ ಏರಿಸಿರೆಂದು ಹೂಡುವರು ಉಗ್ರ ಚಳುವಳಿ ಹೇಗಿದೆ ಸರ್ಕಾರಿ ನೌಕರರ ನಡಾವಳಿ? *****...ಶ್ರೀವಿಜಯ ಹಾಸನAugust 7, 2022 Read More
ಹನಿಗವನನೋವಿನ ಬರೆಮಗ ಸಂಪಾದಿಸುತ್ತಾನೆ ಸಾವಿರ ಸಾವಿರ ಕನಸು ಕಟ್ಟಿದಳು ತಾಯಿ ನೂರು ತರ ಹತ್ತಿದ ಏಣಿ ತಳ್ಳಿ ನಡೆದೇ ಬಿಟ್ಟ ಮಗರಾಯ ಹೃದಯಕ್ಕೆಳೆದು ಸಾವಿರ ನೋವಿನ ಬರೆಯ *****...ಶ್ರೀವಿಜಯ ಹಾಸನJuly 31, 2022 Read More
ಹನಿಗವನಗೋವಿಂದಓಟು ಕೇಳಲು ಬಂದಾಗ ರಾಜಕಾರಣಿಗಳ ಮೊಗ ಚಂದವೇ ಚಂದ ಬೇಡುವರು ಓಟಿನ ಬಿಕ್ಷೆಗಾಗಿ ಚಂದಾ ಚಂದಾ ತುಂಬಿ ತುಳುಕುವುದು ಮೊಗದಲ್ಲಿ ಆನಂದವೇ ಆನಂದ ಗೆದ್ದರವರ ಹಿಡಿಯುವರಿಲ್ಲ ತಲೆತಿರುಗುವುದು ಮದದಿಂದ ಸೋತರೆ ಹಿಡಿಯುವರು ತಿಮ್ಮಪ್ಪನ ಪಾದಾರವಿಂದ ಹಾಡುವರು ...ಶ್ರೀವಿಜಯ ಹಾಸನJuly 24, 2022 Read More
ಹನಿಗವನನಾಯಿಪಾಡುಉದ್ಯೋಗಸ್ತ ಮಹಿಳೆಯರ ನೋಡು ಕತ್ತೆಗಿಂತಲೂ ಕೀಳು ನಾಯಿಪಾಡು ಒಳಗೂ ಹೊರಗೂ ಯಾಂತ್ರಿಕ ದುಡಿತ ಅರಿಯಲಾರರವಳ ಭಾವನೆಗಳ ಮಿಡಿತ *****...ಶ್ರೀವಿಜಯ ಹಾಸನJuly 17, 2022 Read More
ಹನಿಗವನಮತಿಭ್ರಮಣೆಅಯ್ಯೋ ಎಷ್ಟೊಂದು ವರದಕ್ಷಿಣೆ ವರನ ಕೊಳ್ಳಲು ಕೊಡಬೇಕು ದಕ್ಷಿಣೆ ವರನ ಅರಸಿ, ಹಾಕಿ ಭೂಪ್ರದಕ್ಷಿಣೆ ಸುತ್ತಿ ಸುತ್ತಿ ಆಯಿತು ಮತಿಭ್ರಮಣೆ *****...ಶ್ರೀವಿಜಯ ಹಾಸನJuly 10, 2022 Read More
ಹನಿಗವನರಮಣನೀನೆನ್ನ ಜೀವ ನನ್ನ ಪ್ರಾಣ ಎಂದ ನನ್ನ ರಮಣ ಮಾಡಿದ ಬೇರೊಬ್ಬಳ ಹೃದಯಾಪಹರಣ *****...ಶ್ರೀವಿಜಯ ಹಾಸನJuly 3, 2022 Read More
ಹನಿಗವನವರನಮ್ಮೂರ ಶ್ಯಾಮಿಲಿಗೆ ಬಂದ ವರ ಐವತ್ತು ಸಾವಿರ ಅವರ ದರ ವಿಧಿಸಿರುವರು ನಿಖರವಾದ ಕರ ಬಡಪಾಯಿ ಮಾತ್ರ ಅತಿ ವಿಕಾರ *****...ಶ್ರೀವಿಜಯ ಹಾಸನJune 26, 2022 Read More
ಹನಿಗವನಪರಿಸರದೇವರೆಲ್ಲಿ ಎಂದು ಊರೂರು ನೋಡುವೆಯೇನು? ಪಶು-ಪಕ್ಷಿ ಗಿಡ-ಮರ ಪರಿಸರದಲ್ಲಿರುವನು ಅವುಗಳ ರಕ್ಷಿಸು ದೇವರೊಲಿವನು ನೋಡಾ! ಅವಳಿಯೆ ನಿನ್ನಳಿವು ಖಂಡಿತಾ ಮೂಡಾ! *****...ಶ್ರೀವಿಜಯ ಹಾಸನJune 19, 2022 Read More