ಅನಂತನಾರಾಯಣ ಎಸ್

ಹೊನ್ ಪದಕವೇಕೆ?

ನನ್ನ ಕವಿಯೆಂದೆನುವ ಮೆಚ್ಚುಮಾತೇಕೆ? ಪದದ ಸಮ್ಮಿಳನವೋ ಈ ನನ್ನ ಕವಿತೆ! ಎದೆಯ ಉಮ್ಮಳವಿದುವೆ, ಅದು ನಿನ್ನ ಕುರಿತೆ ಕೊರಗುತಿಹೆ ಕೊರಳಿದಕೆ ಹೊನ್ ಪದಕವೇಕೆ? ಇದು ಕವಿತೆಯಹುದೆನುವ ಮಾತು […]

ಒಮ್ಮೊಮ್ಮೆ ಎನಿಸುವುದು

ಒಮ್ಮೊಮ್ಮೆ ಎನಿಸಿವುದು ಜೀವವಾರಿದಮೇಲೆ ಸುಖಸ್ವಪ್ನಗಳ ಬಿಂಬ ಮೂಡುವುದು ಎಂದು, ಕೊಳದ ನೀರಲೆಯಳಿದು ಮೌನದಲಿ ಮಲಗಿರಲು ಸೌಂದರ್ಯದಾಗಸವ ಬಿಂಬಿಸುವ ತೆರದಿ! ಆದರೆಂತೋ ಏನೊ! ಅಂತಾದರೆನಿತುಸುಖ, ಬಾಳದು ಸ್ವಪ್ನವನು ಮರೆಯಬಹುದಾಗ! […]

ಹುಣ್ಣಿಮೆಯ ಚಂದ್ರಮನು

ಹುಣ್ಣಿಮೆಯ ಚಂದ್ರಮನು ಮೋಡಗಳ ಬಲೆಯಿಂದ ಮೆಲ್ಲಮೆಲ್ಲನೆ ಜಾರಿ ಮುಂದೆ ಓಡುತಲಿರಲು ಉಷೆಯಕಡೆ ಕಾಲದಲ್ಲೋಲ ಸಾಗರದಿಂದ ಒಂದಾದಮೇಲೊಂದು ಅಲೆಬಂದು ಅಳಿದಿರಲು ಮೌನದಲಿ-ನಾನಿನ್ನು ಎಚ್ಚತ್ತು ಮಲಗಿರುವೆ! ಹಿಂದೊಂದು ದಿನ ಇಂಥ […]

ತಾರೆ-ಗರಿಕೆ

ತಾರೆ ಬೆಳಗುತಲಿತ್ತು ಆಗಸದಿ ನಗುನಗುತ ಹುಲ್ಲು ಗರಿಕೆಯದೊಂದು ನೆಲದಿ ನಿಂತು ಮೇಲೆ ನೋಡುತಲವಳ ಬೆಳಕು ಬಿನ್ನಾಣಗಳ ಕಂಡು ಬೆರಗಾಗುತಲಿ ಕರೆಯಿತಿಂತು! “ಬಾರೆನ್ನ ಮನದನ್ನೆ-ತಾರಕೆಯೆ ಬಾರೆನ್ನ ಮನದ ಚಿಂತೆಯನಳಿಸಿ […]

ರೈತರ ಹಾಡು

ದುಡಿಯುತಿಹರೂ ನಾವೆ ಮಡಿಯುತಿಹರೂ ನಾವೆ ಜಗಕೆ ಅನ್ನವ ನೀಡುತಿಹರು ನಾವೆ! ತುತ್ತೊಂದು ಅನ್ನವನು ಬೇಡುತಿಹೆವು! ನಿಮಗಾಗಿ ಜೀವನವ ಸವೆಸುತಿಹೆವು! ಮೈಯ ದಂಡಿಪರಾವು ರಕ್ತ ಹರಿಸುವರಾವು ದಿನವು ಜನ್ಮವ […]

ಉರುಳಿರುವ ತಾರೆಗಳು

ಉರುಳಿರುವ ತಾರೆಗಳಿಗಳುತ ನಿಲ್ಲುವರುಂಟೆ? ಮೂಡಿರಲು ಮೂಡಲಲಿ ಉದಯದರಳಿನ ಕಂಪು ಕಳೆದ ಕಾಲದ ತಂಟೆ ಇಂದೇಕೆ? – ಹೊಸ ತಂಪು ಹೃದಯದೊಳಗರಳಿರಲು, ಕಂಪು ಸವಿವುದಬಿಟ್ಟು ಅಳಿದ ಕನಸುಗಳನ್ನು-ಸತ್ವವಿಲ್ಲದ ಹೊಟ್ಟು […]

ಹೊಸ ಹರಯದಲಿ ಹೂವು

ಹೊಸ ಹರಯದಲಿ ಹೂವು ಅರಳುತ್ತ ಮೊಗೆಮೊಗೆದು ಮಾಧುರ್ಯವನು ಬೀರಿ ಹಿಗ್ಗಿನಲಿ ಕುಣಿಯುತಿರೆ ದೂರದಿಂ ಹಾರುತ್ತ ದುಂಬಿ ಅದರೆಡೆ ನಡೆದು ತನ್ನಿಚ್ಛೆ ಝೇಂಕರಿಸಿ ಹೂಂಕರಿಸಿ ಹೂವಿನೆಡೆ ದಿಟ್ಟಿಸುತ ಸುತ್ತೆಲ್ಲ […]

ಕೊಡಗಿನ ಕರೆ

ಅಮ್ಮನನು ಅಪ್ಪಿರುವ ಎಳೆಯ ಕಂದನ ತೆರದಿ ಮೈಸೂರ ಕಂಕುಳಲಿ ಕೊಡಗ ನಾಡು ಗಿರಿಶಿಖರ ಮಲೆಮೌನ, ಕಾಡುಕಳುಪುವ ಕಂಪು ತೊರೆಯನೀರಿನ ಗೀತ ಸೊಗದ ಬೀಡು! ಕಾವೇರಿ ಬರುತಿಹಳು ಕೊಡಗಿನಲಿ […]

ಕಂಗಳಿಂದಲಿ ನಿನ್ನ ನೆನಪ ದೂಡುವುದೆಂತು?

ಕಂಗಳಿಂದಲಿ ನಿನ್ನ ನೆನಪದೂಡುವುದೆಂತು? ಬೇಡಬೇಡಂದರೂ, ಅಲೆಮೇಲೆ ಅಲೆ ಬಂದು ದಡವನೆಡೆಬಿಡದೆಯೇ ಮುತ್ತಿ ಮುತ್ತಿಕ್ಕುವೊಲು ಕಳೆದ ಕಾಲದಲಳಿದ ಕನಸುಗಳು ಹೊರಬಂದು ದುಗುಡ ಹರಡುತಲಿಹವು.  ದಡದ ಮೇಲಿನ ಮರಳು ಹನಿನೀರಿಗಾಗೊರಲಿ […]

ಒಮ್ಮೆ ಹಾಡಿದ ಹಾಡು

ಒಮ್ಮೆ ಹಾಡಿದ ಹಾಡು- ಮತ್ತೊಮ್ಮೆ-ಹಾಡಲೆಂತೋ ಅರಿಯೆ. ಒಮ್ಮೆ ಕಂಡಾಕನಸು ಮತ್ತೊಮ್ಮೆ-ಕಾಣಲೆಂತೋ ಅರಿಯೇ! ಎಲ್ಲ ನಿನ್ನದೆ ಛಾಯೆ ಹೃದಯದೊಲವೆ! ಜೀವವೊಂದೇ ಅಹುದು, ಬದುಕುಗಳು-ಸಾಸಿರವ ಮಿಕ್ಕುವುವು! ಭಾವವೊಂದೇ ಅಹುದು, ರೂಪಗಳು-ಎಣಿಕೆಗೇ […]