
ಸಾಹಿತ್ಯ ಸಾಗರದ ದಡದಿ ನಿಲ್ಲುತಲಂದು ನೋಡಿದೆನು ಆಸೆಯಿಂ ಅಲೆಗಳೆಡೆಗೆ ಒಳಗೆ ಹುಡುಗಿಹ ಮುತ್ತುರತ್ನಗಳನೊಯ್ಯುವೆನೆ ಕನ್ನಡಮ್ಮನ ಅಡಿಗೆ ಮಾಲೆಯಾಗಿಡಲು! ದೂರದಿಂ ಕುಣಿಯುತ್ತ ಹತ್ತಿರಕೆ ಬಂದಿತಲೆ, ನೋಡುತಲೆ ಧೀಗೆಟ್ಟೆ ರೌದ್ರರೂಪ! ಸಾಗರದಿ ಮುಳುಗುತ್...
ಯುಗಯುಗಗಳೇಕಾಂತ ಗೀತಹಾಡುತನಂತ ನೋವಿನಲಿ ಕಾತರಿಸೆ ನನ್ನ ಉಷೆ ಬಂದೆ! ನಿನ್ನ ಬೆಳಕಲಿ ನಿನಗೆ ನನ್ನೆದೆಯ ಕಿರುಹಣತೆ ಅರ್ಪಿಸಿದೆ. ನೀನೊಪ್ಪಿ ಒಲವ ಬಾಳಿಸಿದೆ! ನಾನು ಕವಿ-ನೀ ಕಾವ್ಯ ನಾ ಬರೆದ ಗೀತಗಳು ನಿನ್ನ ಒಲವಿನ ನೂರು ಸೊಗಸು ನೆರಳು. ನೀ ಬೆಳೆಸಿ...
ನಿನ್ನದು ಆ ತೀರ-ನನ್ನದು ಈ ತೀರ ನಟ್ಟನಡುವಿನಂತರ, ತೆರೆಯ ಅಭ್ಯಂತರ ಕಿರಿದಹುದು ಕಿರಿದಲ್ಲ-ಹಿರಿದಲ್ಲ ಹಿರಿದಹುದು ಕಿರುತೊರೆಯ ಅಂತರ-ಕಡಲಿನಂತರ! ಹರಿಯುವಲೆಗಳಂತೆನ್ನ ಮನಸಿನಾತುರ ಹರಿಯುತಿದೆ, ಕೊರೆಯುತಿದೆ ಒಲವ ಕಾತರ ಮೌನದಲ್ಲೆ ಮರುಗಿಸಿದೆ ಹೃದಯ...








