
ಕೆಂಪು ತಾವರೆಯ ಮಾದಕ ಕಂಪಿಗೆ ಕಂಪಿಸಿದೆ ಈ ಮನ ಹೂವಿನ ಮಾಯೆಗೆ ಹೋಳಾಗಿದ ಎದೆ ಕನಸಿಗೆ ಕರೆದಿದೆ ದಿನಾ! ಗಾಳಿಗೆ ತಲೆದೂಗಾಡುವ ಹೂವಿಗೆ ತಾರೆಗು ಇಲ್ಲದ ಮೆರಗು ಅರಬಿರಿದಾ ಆ ಕೆಂಪು ದಳಗಳಿಗೆ ಅಪ್ಸರೆ ಕೆನ್ನೆಯ ಬೆಳಗು ಕೊಳದಲ್ಲಿದು ಕೊಯ್ಯಲು ಬಾರದು ...
ಯಾರಿವಳೀ ದೀಪಿಕಾ? ಕವಿಕನಸಿಗೆ ಕಣ್ಣು ಬಂತೊ ಉಸಿರಾಡಿತೊ ರೂಪಕ! ಬಿಸಿಯೂಡಿಸಿ ಹಸಿರಾಡಿಸಿ ಕನವರಿಕೆಯ ನಾಡಿಗೆ ಹಳಿಯನೆಳೆದ ಹದಿನಾರರ ಬಿರಿವ ಹೂವ ಮಾಲಿಕಾ ಕನಕಾಂಬರ ಬೆಳಕ ಹೊದ್ದ ಮುಗಿವ ಹಗಲ ತುದಿಗೆ ಮೊಲ್ಲೆ ಮಾಲೆಯಾಗಿ ತೂಗಿ ನೀಲನಭದ ಜಡಗೆ ಚಿತ್ರವ...
ಎಲ್ಲಿ ಜಾರಿತೋ ಮನವು ಎಲ್ಲೇ ಮೀರಿತೋ, ಎಲ್ಲಿ ಅಲೆಯುತಿಹುದೋ ಏಕೆ ನಿಲ್ಲದಾಯಿತೋ. ದೂರದೊಂದು ತೀರದಿಂದ ತೇಲಿ ಪಾರಿಜಾತ ಗಂಧ ದಾಟಿ ಬಂದು ಬೇಲಿಸಾಲ ಪ್ರೀತಿ ಹಳೆಯ ಮಧುರ ನೋವ ಎಲ್ಲಿ ಜಾರಿತೋ… ಬಾನಿನಲ್ಲಿ ಒಂಟಿ ತಾರೆ ಸೋನೆ ಸುರಿವ ಇರುಳ ಮೋರೆ...
ಯಾವುದೀ ಹೊಸ ಸಂಚು ಎದೆಯಂಚಿನಲಿ ಮಿಂಚಿ ಮನಸು ಕನಸುಗಳನ್ನು ಕಲೆಸಿರುವುದು? ಗಿರಿಕಮರಿಯಾಳದಲಿ ತೆವಳಿದ್ದ ಭಾವಗಳ ಮುಗಿಲ ಮಂಚದೊಳಿಟ್ಟು ತೂಗುತಿಹುದು? ಸತ್ತ ಬಾಳಿಗೆ ಮತ್ತೆ ಅಮೃತವೆರೆದು ಕತ್ತಲಾಳಗಳಲ್ಲಿ ದೀಪವುರಿದು, ಬಾಳು ಕೊನೆಯೇರುತಿದೆ ಬೆಳಕಿನ...
ಮಲಗೋ ಮಲಗೆನ್ನ ಮರಿಯೆ ಬಣ್ಣದ ನವಿಲಿನ ಗರಿಯೆ, ಎಲ್ಲಿಂದ ಬಂದೆ ಈ ಮನೆಗೆ ನಂದನ ಇಳಿದಂತೆ ಬುವಿಗೆ? ತಾವರೆದಳ ನಿನ್ನ ಕಣ್ಣು ಕೆನ್ನೆ ಮಾವಿನ ಹಣ್ಣು, ಸಣ್ಣ ತುಟಿಯ ಅಂದ ಬಣ್ಣದ ಚಿಗುರಿಗು ಚಂದ, ನಿದ್ದೆಯ ಮರುಳಲ್ಲಿ ನಗಲು ಮಂಕಾಯ್ತು ಉರಿಯುವ ಹಗಲು! ...
ಬಾರೆ ನನ್ನ ದೀಪಿಕಾ ಮಧುರ ಕಾವ್ಯ ರೂಪಕ, ಕಣ್ಣ ಮುಂದೆ ಸುಳಿಯೆ ನೀನು, ಕಾಲದಾ ತೆರೆ ಸರಿದು ತಾನು, ಜನುಮ ಜನುಮ ಜ್ಞಾಪಕ. ನಿನ್ನ ಬೊಗಸೆಗಣ್ಣಿಗೆ, ಕೆನ್ನೆ ಜೇನು ದೊನ್ನೆಗೆ, ಸಮ ಯಾವುದೇ ಚೆನ್ನೆ ನಿನ್ನ ಜಡೆ ಹರಡಿದ ಬೆನ್ನಿಗೆ? ನಿನ್ನ ಕನಸು ಬಾಳಿಗ...
ಬನ್ನಿ ಭಾವಗಳೇ ಬನ್ನಿ ನನ್ನೆದೆಗೆ ಕರೆಯುವೆ ಕೈ ಬೀಸಿ ಬತ್ತಿದೆದೆಯಲ್ಲಿ ಬೆಳೆಯಿರಿ ಹಸಿರನು ಪ್ರೀತಿಯ ಮಳೆ ಸುರಿಸಿ || ಬನ್ನಿ ಸಂಜೆ ಹೊಂಬಿಸಿಲಿನ ಹೊಳೆಯೊಳು ಮೀಯುವ ಮುಗಿಲಿನಲಿ ತವರಿನೆದೆಗೆ ತಂಪೆರೆಯುವ ಮೇಘದ ಪ್ರೀತಿಯ ಧಾರೆಯಲಿ || ಲೋಕಕೆ ಹೊದಿ...
ಯಾಕೆ ಹೀಗೆ ಬೀಸುತ್ತಿರಬೇಕು ಗಾಳಿ ಯಾಕೆ ಕಡಲು ದಡ ಮೀರದೆ ನಿಂತಿದೆ ತಾಳಿ; ನೆಲಕೆ ಯಾಕೆ ಮಳೆ ಹೂಡಲೆ ಬೇಕು ದಾಳಿ ನಗುವ ಯಾಕೆ ಯಮ ಜೀವಗಳೆಲ್ಲವ ಹೂಳಿ? ಹೇಗೆ ಚಿಗುರುವುದು ಬೋಳು ಗಿಡದಿಂದ ಹಸಿರು ಹೇಗೆ ಸೇರುವುದು ದೇಹ ದೇಹದಲಿ ಉಸಿರು; ಯಾವುದು ಈ ವ...
ಅಮ್ಮ ಎಂಬ ಮಾತಿಗಿಂತ ಬೇರೆ ಮಂತ್ರ ಎಲ್ಲಿದೆ? ಅದು ನೀಡುವ ಶಾಂತಿ ಕಾಂತಿ ಯಾವ ತಾರೆ ರವಿಗಿದೆ? ಹಾಲು ಕುಡಿಸಿ ಹೃದಯ ಬಿಡಿಸಿ ಪ್ರೀತಿ ಉಣಿಸಿ ಮನಸಿಗೆ ಬಾಳ ತೇದು ಮಕ್ಕಳಿಗೆ ಬೆರೆದಳಲ್ಲ ಕನಸಿಗೆ! ಗಾಳಿಯಲ್ಲಿ ನೀರಿನಲ್ಲಿ ಮಣ್ಣು ಹೂವು ಹಸಿರಲಿ ಕಾಣದ...
ಬಂದೇ ಬರತಾವ ಕಾಲ ಮಂದಾರ ಕನಸನು ಕಂಡಂಥ ಮನಸನು ಒಂದು ಮಾಡುವ ಸ್ನೇಹಜಾಲ – ಬಂದೇ ಬರತಾವ ಕಾಲ ಮಾಗಿಯ ಎದೆ ತೂರಿ ಕೂಗಿತೊ ಕೋಗಿಲ, ರಾಗದ ಚಂದಕೆ ಬಾಗಿತೊ ಬನವೆಲ್ಲ, ತೂಗುತ ಬಳ್ಳಿ ಮೈಯನ್ನ ಸಾಗದು ಬಾಳು ಏಕಾಕಿ ಎನುತಾವ – ಬಂದೇ ಬರತಾವ ...







