
ಸ್ಫೂರ್‍ತಿಯ ಮೂರ್‍ತಿಗೊಂಡಂತೆ ಕಂಡವು ಆನೆ ಕುದುರೆ ಹಾ- ವುಗೆ, ನಿನ್ನ ಹೊಸ್ತಿಲವ ದಾಟಿ ಇಲ್ಲಡಿಯಿಟ್ಟೆ; ಬಿಜಯ ಮಾಡಿಸಿದೆ ವೈಭವದಿ, ದಿಗ್ವಿಜಯ ಮಾ- ಡುವೆ, ಕುರುಹಗಳ ತೋರಿ ಹೇಳುತಿಹೆಯಾ, ನಲ್ಲ! ನನಸೆಂದು ತೋರಿ ಹಾರೈಸಿದುದು ಕನಸಾಗೆ, ಕನಸು ಕನ್ನ...
ಜನ್ಮ ಜನ್ಮಾಂತರದ ಸತ್ಯ ಸಂಕಲ್ಪವೇ, ಫಲಹೊಂದು ಕಾಲ ಬಂದಾಗ. ಒಗರಿಳೆದು ಹುಳಿ ಹೋಗಿ, ಸವಿ ಹವಣುಗೋಳುತಿರೆ, ಬಣ್ಣ ಹೊಂಬಣ್ಣ- ಕೇರುತಿರೆ, ಬಳುಕಿ ಗಾಳಿಗೆ, ಬೆಂದು ಬಿಸಿಲಿನಲಿ, ನಾನು ಕಾಯುವೆ; ಹಸಿವ ಎಸರೇರಿ ಕುದಿಬಂದು ಉಕ್ಕಿ ಹೋಗಲಿ, ಉರುವಲಿಲ್ಲದಲ...








