ಹನಿಗವನ ಬಹುಮಕ್ಕಳ ತಂದೆ April 9, 2022January 9, 2022 ಹ್ಞೂ ಒಂದು ಬೇಕು ಎರಡು ಸಾಕು ಮಿಕ್ಕವರನ್ನು ನೀವು ಸಾಕುತ್ತೀರಾ? *****
ಹನಿಗವನ ಇಹ-ಪರ February 28, 2022February 28, 2022 ಶ್ರಾದ್ಧದ ದಿನ ವೃದ್ಧರೊಬ್ಬರು ಆಗಮಿಸಿ ‘ಪರ’ ಸ್ಥಳದಿಂದೆನಲು ಬೆದರಿ ಬೆವೆತಿದ್ದೆ. *****
ಹನಿಗವನ ಕಳ್ಳ February 26, 2022January 9, 2022 ಮೆಲ್ಲ ಮೆಲ್ಲನೆ ಬಂದು ಗಲ್ಲಾಕೆ ಕೈಯ ಕೊಟ್ಟು ನಿಲ್ಲದೆ ಓಡಿ ಪೋದ *****
ಹನಿಗವನ ಮಿನಿಸ್ಟರ್ February 10, 2022February 9, 2022 ಯಥಾ ಪ್ರಕಾರ ಮಂತ್ರಿಗಳು ಸಮಾರಂಭಕ್ಕೆ ತಡವಾಗಿ ಬಂದಾಗ ಸಭೆಯಲ್ಲುಂಟಾಗಿತ್ತು ಕೋಲಾಹಲ Mini Stir! *****
ಹನಿಗವನ ಅಭಿನಂದನೆ February 3, 2022February 3, 2022 ಗುಡುಗಿದ್ದರು ರಾಜಕಾರಣಿ ವೇದಿಕೆಯಿಂದ ಗಣ್ಯರೊಬ್ಬರ ಸನ್ಮಾನ ಸಮಾರಂಭದಲ್ಲಿ. ಯಿವರು ಅಂತಿಂತೋರಲ್ಲ ಯಿಡೀ ಕರ್ನಾಟಕದ ಯೆಮ್ಮೆ! *****