
ಆವಲಹಳ್ಳಿಯಲ್ಲಿ ಸಭೆ
- ಆವಲಹಳ್ಳಿಯಲ್ಲಿ ಸಭೆ - December 27, 2020
- ಮೇಷ್ಟ್ರು ಮುನಿಸಾಮಿ - October 18, 2020
- ದೊಡ್ಡ ಬೋರೇಗೌಡರು - May 10, 2020
ಪ್ರಕರಣ ೯ ಹಿಂದೆಯೇ ನಿಶ್ಚೈಸಿದ್ದಂತೆ ಆವಲಹಳ್ಳಿಯಲ್ಲಿ ಉಪಾಧ್ಯಾಯರ ಸಂಘದ ಸಭೆಯನ್ನು ಸೇರಿಸಲು ಏರ್ಪಾಟು ನಡೆದಿತ್ತು. ರಂಗಣ್ಣನು ಹಿಂದಿನ ದಿನ ಸಾಯಂಕಾಲವೇ ಆವಲಹಳ್ಳಿಗೆ ಬಂದು ಮೊಕ್ಕಾಂ ಮಾಡಿದನು. ಸಭೆಯಲ್ಲಿ ಕಾರ್ಯಕ್ರಮಗಳಲ್ಲ ಚೆನ್ನಾಗಿ ನೆರವೇರಬೇಕೆಂದು ಮಾಧ್ಯಮಿಕ ಪಾಠಶಾಲೆಯ ಮುಖ್ಯೋಪಾಧ್ಯಾಯರ ಮತ್ತು ಸಹಾಯೋಪಾಧ್ಯಾಯರ ನೆರವನ್ನು ಪಡೆದುಕೊಂಡಿದ್ದನು. ಜೊತೆಗೆ ಕೆಲವು ದೊಡ್ಡ ಪ್ರಾಥಮಿಕ ಪಾಠಶಾಲೆಗಳ ಅನುಭವಿಗಳೂ ದಕ್ಷರೂ ಆದ ಮುಖ್ಯೋಪಾಧ್ಯಾಯರನ್ನೂ ಸಹಾಯೋಪಾಧ್ಯಾಯರನ್ನೂ […]