ವಚನ

ಲಿಂಗಮ್ಮನ ವಚನಗಳು – ೬೭

ಕಂಡು ಕೇಳಿಹೆನೆಂಬ ದುಂದುಗ ಬಿಟ್ಟು, ನೋಡಿ ನುಡಿವೆನೆಂಬ ನೋಟವ ನಿಲಿಸಿ, ಮಾಡಿ ಕೂಡಿಹೆನೆಂಬ ಮನ ನಿಂದು, ತನುವ ಮರೆದು, ತಾ ನಿಜ ಸುಖಿಯಾದಲ್ಲದೆ, ಘನವ ಕಾಣಬಾರದೆಂದರು ನಮ್ಮ […]

ಲಿಂಗಮ್ಮನ ವಚನಗಳು – ೬೬

ಕಂಡಿಹೆ ಕೇಳಿಹೆನೆಂಬ ದ್ವಂದ್ವವ ಹಿಂಗಿ, ಉಂಡಿಹೆ ಉಟ್ಟಿಹೆನೆಂಬ ಹಂಗವ ಬಿಟ್ಟು, ನಡಿದಿಹೆ ನುಡಿದಿಹೆನೆಂಬ ಮಾಟವ ನಿಲಿಸಿ, ಜಗದಾಟವ ನಿಲಿಸಿ, ಮಾಟ ಕೂಟ ಜಗದಾಟ ಕೋಟಲೆಯೊಳು ಸಿಕ್ಕದೆ ದಾಟಿ […]

ಲಿಂಗಮ್ಮನ ವಚನಗಳು – ೬೪

ಕತ್ತಲೆ ಬೆಳಗೆಂಬುದಿಲ್ಲ ನಿತ್ಯನಾದಂಗೆ. ಚಿತ್ತಪರಚಿತ್ತವೆಂಬುದಿಲ್ಲ ವಸ್ತುವಿನ ನೆಲೆಯ ಕಂಡವಂಗೆ. ನಿತ್ಯ ಅನಿತ್ಯವೆಂಬುದಿಲ್ಲ ಕರ್ತುತಾನಾದವಂಗೆ. ಈ ಮೂರರ ಗೊತ್ತುವಿಡಿದು ನಿಶ್ಚಿಂತನಾಗಿ ನಿರ್ವಯಲನಾದ ಶರಣರ ಪಾದಕ್ಕೆ ಶರಣೆಂದು ಸುಖಿಯಾದೆನಯ್ಯ ಅಪ್ಪಣಪ್ರಿಯ […]

ಲಿಂಗಮ್ಮನ ವಚನಗಳು – ೬೩

ಸಾಕೈಯ್ಯ ಲೋಕದ ಹಂಗು ಹರಿಯಿತ್ತು. ತನುವಿನಾಸೆ ಬಿಟ್ಟಿತ್ತು. ಮನದ ಸಂಚಲ ನಿಂದಿತ್ತು. ನುಡಿಯ ಗಡಣ ಹಿಂಗಿತ್ತು. ಘನವ ಬೆರೆಯಿತ್ತು. ಬೆಳಗ ಕೂಡಿತ್ತು. ಬಯಲೊಳಗೋಲಾಡಿ ಸುಖಿಯಾದೆನಯ್ಯ ಅಪ್ಪಣಪ್ರಿಯ ಚನ್ನಬಸವಣ್ಣಾ. […]

ಲಿಂಗಮ್ಮನ ವಚನಗಳು – ೬೨

ಕರಣವ ಸುಟ್ಟಿ. ಕಂದಲ ನೋಡಿದೆ. ಮರನ ಮುರಿದೆ. ಬಣ್ಣವ ಹರಿದೆ. ಬಿನ್ನಗಣ್ಣು ಕೆಟ್ಟಿತ್ತು. ಜ್ಞಾನಗಣ್ಣಿಲಿ ನಿಮ್ಮನೆ ನೋಡಿ ಕೂಡಿ ಸುಖಿಯಾದೆನಯ್ಯ ಅಪ್ಪಣಪ್ರಿಯ ಚನ್ನಬಸವಣ್ಣಾ. *****

ಲಿಂಗಮ್ಮನ ವಚನಗಳು – ೬೦

ಈ ಪರಂಜ್ಯೋತಿ ಪ್ರಕಾಶವಾದ ಬೆಳಗ ನೋಡಿ ನೋಟವ ಮೆರೆದೆ. ಕೂಡಿ ಕೂಟವ ಮರೆದೆ. ತಾನು ತಾನಾಗಿಪ್ಪ ಮಹಾಬೆಳಗಿನಲ್ಲಿ ಲೋಲಾಡಿ ಸುಖಿಯಾದೆನಯ್ಯ ಚನ್ನಮಲ್ಲೇಶ್ವರನ ಕರುಣವಿಡಿದು ಅಪ್ಪಣಪ್ರಿಯ ಚನ್ನಬಸವಣ್ಣಾ. *****

ಲಿಂಗಮ್ಮನ ವಚನಗಳು – ೫೯

ಕದಳೀಯ ಬನದೊಳಗಿರುವ ಲಿಂಗವ ಅರಸಿದರೆ ಕಾಣಬಾರದು. ನೋಡಿದರೆ ನೋಟಕ್ಕಿಲ್ಲ. ಹಿಡಿದರೆ ಹಸ್ತಕ್ಕಿಲ್ಲ. ನೆನೆದರೆ ಮನಕ್ಕಗೋಚರ. ಇಂತು ಮಹಾಘನವ ಹೃದಯಲ್ಲಿ ನೆಲೆಗೊಳಿಸಿದ ಶರಣನ ಕಂಗಳಲ್ಲಿ ಹೆರಿಹಿಂಗದೆ ನೋಡಿ, ಅವರಂಘ್ರಿಯಲ್ಲಿ […]

ಲಿಂಗಮ್ಮನ ವಚನಗಳು – ೫೮

ಅಂತರಂಗ ಬಹಿರಂಗ ಶುದ್ಧವಿಲ್ಲದೆ ನುಡಿವರು, ಸಂತೆಯ ಸೂಳಿಯರಂತೆ. ಅಂತರಂಗ ಬಹಿರಂಗವೆಂಬುದಿಲ್ಲ. ನಮ್ಮ ಶಿವಶರಣರಿಗೆ ಅಂತರಂಗವೆಲ್ಲ ಅರುಹಾಯಿತ್ತು. ಬಹಿರಂಗವೆಲ್ಲ ಲಿಂಗವಾಯಿತ್ತು. ಆ ಲಿಂಗದಲ್ಲಿ ನುಡಿದು, ಲಿಂಗದಲ್ಲಿ ನಡೆದು, ಲಿಂಗದಲ್ಲಿ […]