ಮಕ್ಕಳು

ಮಗು :- "ಅಪ್ಪ ತಂದೆಗಿಂತ ಮಕ್ಕಳು ಬುದ್ದಿವಂತಲ್ವಾ...." ತಂದೆ :- "ಯಾಕೆ..." ಮಗು :- "ಅಲೆಕ್ಸಾಂಡರ್ ಗ್ರಾಹಂಬೆಲ್ ಟೆಲಿಫೋನ್ ಕಂಡು ಹಿಡಿದ, ಮಾರ್ಕೊನಿ ರೇಡಿಯೋ ಕಂಡುಹಿಡಿದ, ಆದರೆ ಅವರ ಅಪ್ಪಂದಿರು ಏನು ಕಂಡು ಹಿಡಿದಿದ್ದಾರೆ."...

ತಪ್ಪು

ಮಂಜು :- "ನನ್ನ ಹೆಂಡ್ತಿಗೆ ಮನೇಲಿ ಸಕ್ಕರೆ ಇದೆಯಲ್ಲಾ ಟೀಗೆ ಸಕ್ಕರೆ ಜಾಸ್ತಿ ಹಾಕು ಎಂದಿದ್ದೆ ತಪ್ಪಾಯ್ತು..." ರಾಘು :- "ಯಾಕೋ..." ಮಂಜು :- "ಮನೆಲೀ ಉಪ್ಪು ಜಾಸ್ತಿ ಇದೆಯೆಂದು ಸಾರಿಗೆ...." *****

ಸುದ್ದಿ

ಹವಾಮಾನ ವೀಕ್ಷಣಾಲಯ ಸಿಬ್ಬಂದಿ ಮುಷ್ಕರ ಹೂಡಿದ್ದರು. ದೂರ ದರ್ಶನದ ಹವಾಮಾನ ವಾರ್ತೆಯಲ್ಲಿ ಪ್ರಕಟವಾದ ವರದಿ ಹೀಗಿತ್ತು. "ಇಂದಿನ ಹವಾಮಾನ ಇಲಾಖೆ ಸಿಬ್ಬಂದಿಗಳು ಮುಷ್ಕರ ಹೂಡಿರುವುದರಿಂದ ನಗರದಲ್ಲಿ ಇಂದು - ನಾಳೆ ಹವಾಮಾನ ಇರುವುದಿಲ್ಲ...." *****

ನೆನಪು

ಚಿತ್ರ ನಟನೊಬ್ಬ ಫೋನ್ ಇನ್ ಕಾರ್‍ಯಕ್ರಮದಲ್ಲಿ ತನ್ನ ಹೊಸ ಸಿನಿಮಾದ ಬಗ್ಗೆ ಅಭಿಮಾನಿಯೊಬ್ಬನ ಬಳಿ ಕೇಳಿದ "ಇಡೀ ಚಿತ್ರದಲ್ಲಿ ನಿಮ್ಮ ನೆನಪಿನಲ್ಲಿ ಉಳಿಯುವ ಭಾಗ ಯಾವುದು?" ಅಭಿಮಾನಿ ಹೇಳಿದ. "ಮದ್ಯಾಂತರ" (ಇಂಟರ್‌ವಲ್‌) *****

ತಪ್ಪು

ಮೇಷ್ಟ್ರು : "ಭಾರತದ ರಾಜಧಾನಿ ಯಾವುದು?" ಶೀಲಾ : "ಬೆಂಗಳೂರು" ಮೇಷ್ಟ್ರು : "ತಪ್ಪು ಉತ್ತರ ಕೊಡ್ತಿದ್ದಿ." ಶೀಲಾ : "ಇಲ್ಲ ಸಾರ್ ನೀವು ತಪ್ಪು ಪ್ರಶ್ನೆ ಕೇಳಿದ್ರಿ... ಕರ್ನಾಟಕದ ರಾಜಧಾನಿ ಕೇಳಬೇಕಾಗಿತ್ತು." *****
cheap jordans|wholesale air max|wholesale jordans|wholesale jewelry|wholesale jerseys