Home / ಲೇಖನ / ಇತರೆ / ವರ್ತಮಾನಪತ್ರಗಳ ಸುದ್ದಿಗಾರರು

ವರ್ತಮಾನಪತ್ರಗಳ ಸುದ್ದಿಗಾರರು

ಸರ್ ಎಡ್ವರ್ಡ್ ಬೆಕ್ ಎಂಬವನು ಹಿಂದುಸ್ತಾನದಲ್ಲಿ ಲಂಡನ್ ಟಾಯಮ್ಸ್ ದ ಪ್ರತಿನಿಧಿಯಾಗಿದ್ದನು. ಆಗಿನ ವ್ಹಾಯಿಸ್‌ರಾಯನಾದ ಲಾರ್ಡ್ ಹಾರ್ಡಿಂಜ್ ನ ಮೇಲೆ ಬಾಂಬಿನ ಅತ್ಯಾಚಾರವಾದಾಗ ಇವನು ದಿಲ್ಲಿಯಲ್ಲಿ ಇದ್ದನು. ಆ ದಿವಸ ದಿಲ್ಲಿಯಲ್ಲಿ ದರ್ಬಾರವಿತ್ತು. ಎಲ್ಲ ಮೇಲಧಿಕಾರಿಗಳೂ ಪ್ರಮುಖ ನಾಗರಿಕರ ದರ್ಬಾರು ನೆರೆಯುವ ಮೊದಲೇ ಸಭಾಗೃಹದಲ್ಲಿ ಕುಳಿತಿದ್ದರು. ವರ್ತಮಾನಪತ್ರಗಳ ಪ್ರತಿನಿಧಿಗಳೂ ಸಭಾಗೃಹದಲ್ಲಿ ಇದ್ದರು. ಸರ್ ಎಡ್ವಡ್ ಬೆಕ್‌ನು ಮಾತ್ರ ವ್ಹಾಯಿಸ ರಾಯನ ಮೆರವಣಿಗೆಯೊಂದಿಗೆ ದಿಲ್ಲಿಯ ಬೀದಿಗಳಲ್ಲಿ ಹೊರಟಿದ್ದನು. ಅಷ್ಟರಲ್ಲಿ ಬಾಂಬು ವ್ಹಾಯಿಸರಾಯನ ಮೇಲೆ ಬಿತ್ತು. ಕೂಡಲೆ ಸರ್ ಎಡ್ವರ್ಡ ಬೆಕ್‌ನು ಪಕ್ಕದಲ್ಲಿದ್ದ ಪೋಸ್ಟ ಆಫೀಸಿನಿಂದ ಲಂಡನ್ ಟಾಯಿಮ್ಸ್‌ಕ್ಕೆ ‘ ಆರ್ಜಂಟ್ ‘ ತಂತೀ ಕಳಿಸಿದನು. ಆದ್ದರಿಂದ ದಿಲ್ಲಿಯಲ್ಲಿ ಬಾಂಬ ಹಾರಿದ ಅರ್ಧ ತಾಸಿನಲ್ಲಿ ಲಂಡರ್ನ ಟಾಯಿಮ್ಸ್ ಪತ್ರವು ದೊಡ್ಡ ಅಕ್ಷರಗಳಲ್ಲಿ ಈ ಸುದ್ದಿಯನ್ನು ಮುದ್ರಿಸಿ ವಿಶೇಷ ಸಂಚಿಕೆಯನ್ನು ಹೊರಡಿಸಿತು. ಲಂಡನ್ನು -ಅದೇಕೆ ಇಡಿ ಇಂಗ್ಲಂಡವೇ-ಗಾಬರಿಗೊಂಡಿತು. ಇಲ್ಲಿ ದಿಲ್ಲಿಯಲ್ಲಿ ದರ್ಬಾರಿನ ಸಮಾರಂಭವಿದ್ದುದರಿಂದ ಸರಕಾರದಿಂದ ಅಧಿಕೃತ ವರದಿಯನ್ನು ಕಳಿಸಲು ತಡವಾಯಿತು. ಲಂಡನ್’ದಿಂದ ಬಾದಶಹರ ಕಡೆಯಿಂದಲೂ, ಭಾರತ ಮಂತ್ರಿಗಳ ಕಡೆಯಿಂದಲೂ, ಮುಖ್ಯ ಮಂತ್ರಿಗಳ ಕಡೆಯಿಂದ ಒಂದರ ಮೇಲೊಂದು ಅನೇಕ ತಾರುಗಳು ವ್ಹಾಯಿಸರಾಯನ ಪ್ರಕೃತಿಯ ವಿಚಾರಣೆಯ ಬಗ್ಗೆ ಬಂದವು. ಕಡೆಗೆ ಸುದ್ದಿಯು ಬಹಳ ತಡವಾಗಿ ಹೋದದ್ದರಿಂದ ಹಿಂದುಸ್ತಾನ ಸರಕಾರಕ್ಕೆ ‘ತಾಕೀದು’ ಬಂತು.

ಕೆಲವು ದಿವಸಗಳು ಸಂದಿದವು. ಒಂದು ದಿವಸ ಸರ್ ಎಡ್ವರ್ಡ್ ಬೆಕ್‌ನ ಪತ್ನಿಯಾದ ಲೇಡಿ ಬೆಕ್ ಇವಳು ಕಲಕತ್ತೆಯಲ್ಲಿ ವ್ಹಾಯಿಸರಾಯನೊಂದಿಗೆ ಭೋಜನ ಮಾಡುತ್ತಿದ್ದಳು. ಆಗ ಅವರೀರ್ವರ ನಡುವೆ ಕೆಳಗಿನ ಸಂಭಾಷಣೆ ನಡೆಯಿತು :

ಲೇಡಿ ಬೆಕ್:- ಬಾಂಬು ಬಿದ್ದಾಗೆ ನಿಮಗೆ ಹೇಗೆ ಅನಿಸಿತು ?
ವ್ಹಾಯಿಸರಾಯರು :-ಏನೂ ಇಲ್ಲ! ಕೆಲವು ಮಿನಿಟುಗಳವರೆಗೆ ನನಗೆ ಅರಿವು ಇದ್ದಿಲ್ಲ. ಬಾಂಬು ಬಿದ್ದ ಸುದ್ದಿಯನ್ನು ನೀವು ಎಲ್ಲಿ ಕೇಳಿದಿರಿ ?
ಲೇಡಿ ಬೆಕ್ : ನಾನು ಕಲಕತ್ತೆಯಲ್ಲಿ ಕುದುರೆಯ ಶರ್ಯತ್ತು ನೋಡುತ್ತಿದ್ದೆ. ಆಗ ವರ್ತಮಾನಪತ್ರ ಮಾರುವ ಹುಡುಗರು ಒದರುತ್ತ ಬಂದರು.
ವ್ಹಾಯಿಸರಾಯ:- ಆಗ ನಿಮ್ಮ ಮನಸ್ಸಿನಲ್ಲಿ ಯಾವ ವಿಚಾರಗಳು ಬಂದವು ?
ಲೇಡಿ ಬೆಕ್:- ನನ್ನ ಗಂಡನು ಎಲ್ಲಕ್ಕೂ ಮೊದಲು ಸುದ್ದಿಯನ್ನು ಇಂಗ್ಲೆಂಡಿಗೆ ಕಳಿಸಿದನೋ ಇಲ್ಲವೋ ಎಂಬ ವಿಚಾರ ಬಂತು !
ವ್ಹಾಯಿಸರಾಯ :- ನಿನ್ನ ಗಂಡನು ಮೊದಲು ಸುದ್ದಿ ಕಳಿಸಿ ಹಿಂದುಸ್ತಾನ ಸರಕಾರಕ್ಕೆ ಚನ್ನಾಗಿ ತಾಕೀದು’ ಕೊಡಿಸಿದನು !!

ಜಗತ್ತಿನ ಪ್ರವಾಸ ಮಾಡಿದೆ ಒಬ್ಬ ಇಂಗ್ಲೀಷ ಪ್ರವಾಸಿಯು ಅಮೆರಿಕೆಗೆ ಹೋದನು. ಅಲ್ಲಿಯ ವರ್ತಮಾನಪತ್ರದ ಸುದ್ದಿಗಾರನಿಗೆ ತನ್ನ ಪ್ರವಾಸದ ಅನುಭವವನ್ನು ವರ್ಣಿಸಹತ್ತಿದನು. ಆಗೆ ಹಿಂದುಸ್ಥಾನದ ಸುದ್ದಿಯೂ ಹೊರಟಿತು. ಆಗ ಆ ಸುದ್ದಿಗಾರನು, “ನಿಮಗೆ ಬಂಗಾಲಿ ಹುಲಿಗಳ ದರುಶನ ಆಯಿತೋ?” ಎಂದು ಕೇಳಿದನು. ಆಗ ಆ ಆಂಗ್ಲನು ಅಂದನು : “ಇಲ್ಲ. ಹುಲಿಗಳು ಹಗಲು ಮಲಗುತ್ತಿದ್ದವು. ಆಗ ನಾನು ತಿರುಗಾಡುತ್ತಿದ್ದೆ. ರಾತ್ರಿ ಹುಲಿಗಳು ಹೊರಬೀಳುತ್ತಿದ್ದವು. ಆಗ ನಾನು ಮಲಗುತ್ತಿದ್ದೆ. ಮರುದಿವಸ “ಚತುರ ಆಂಗ್ಲ ಪ್ರವಾಸಿಯು ಬಂಗಾಲಿ ಹುಲಿಗಳನ್ನು ತಪ್ಪಿಸಿದ ರೀತಿ” ಎಂಬ ಒಕ್ಕಣಿಕೆಯ ಕೆಳಗೆ ಈ ಸುದ್ದಿಯು ಪ್ರಸಿದ್ಧವಾಯಿತು!
* * * *

ಲಂಡನ್ ಪಟ್ಟಣದಲ್ಲಿ ಪಿಕ್ಯಾಡಲಿ ಸ್ಕ್ವೇರ್ ಎಂಬ ಹೆಸರಿನ ಬೀದಿಯಲ್ಲಿ ಯಾವಾಗಲೂ ಜನದಟ್ಟಣೆಯು ಬಹಳ. ಈ ಚೌಕಿನಲ್ಲಿ ಒಬ್ಬ ಕುಡುಕನು ಜೋಲಿ ಹೊಡೆಯುತ್ತ ಹೋಗುತ್ತಿದ್ದನು. ಒಬ್ಬ ಕ್ರಿಶ್ಚಿಯನ್ ಪಾದ್ರಿಯು ಅವನಿಗೆ ಭೆಟ್ಟಿಯಾದನು :

ಪಾದ್ರಿ – ನೀನು ಕುಡಿಯುವ ಮಾರ್ಗವನ್ನು ಬಿಡು, ನನ್ನ ಸಂಗಡ ನಡೆ, ನಾನು ನಿನಗೆ ಸ್ವರ್ಗದ ಮಾರ್ಗವನ್ನು ತೋರಿಸುವೆ.
ಕುಡುಕ – ಎಷ್ಟು ದಿವಸಗಳಿಂದ ನೀವು ಈ ಸ್ವರ್ಗದ ಮಾರ್ಗ ಹಿಡಿದಿರುವಿರಿ ?
ಪಾದ್ರಿ – ಕಳೆದ ೨೮ ವರ್ಷಗಳಿಂದ.
ಕುಡುಕ – ೨೮ ವರ್ಷಗಳ ನಂತರ ನೀವು ಇನ್ನೂ ಪಿಕ್ಯಾಡಿಲಿ ಚೌಕಿನಲ್ಲಿಯೇ ಇರುವಿರಾದರೆ ನೀವು ನಿಮ್ಮ ಮಾರ್ಗವನ್ನು ಬಿಟ್ಟು ನನ್ನನ್ನು ಹಿಂಬಾಲಿಸುವದು ಲೇಸು!
*****

Tagged:

Leave a Reply

Your email address will not be published. Required fields are marked *

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...