ಆಕಾಶದಲಿ ಹಾರುವ ಮೌನಹಕ್ಕಿಯೇ
ಸಾಕಾಯಿತೋ ಏನು ನಿನಗೋ (ಹೇ)
ಹಾರಾರೀ ಬಾನ ಮಧ್ಯದಲಿ ನೀ
ತೋರಿದೆ ನಿನ್ನ ಸೌಂದರ್ಯ ರೆಕ್ಕೆಗಳಾ
ಸೂರ್ಯನು ಮುಳುಗುವ ಸಮಯದಿ
ಕಾರ್ಯವ ನೀ ಮುಗಿಸೀ ತಿರಿವಿ ಬಂದೆ
ಗೂಡಿಗೇ ಆದರೇನು ನಿನಗೆ ಬಿಡುವಿಲ್ಲವೇ?
ಧಡಪಡಿಸಿ ಹೋದಿ ಮಕ್ಕಳನಾ ನೀ ಇಲ್ಲಿ ಬಿಟ್ಟು
ಉದ್ಯೋಗ ನಿನಗೇನು ಕಷ್ಟ ಹೇಳು
ಮದ್ಯ ಊರಿನ ಮನೆಮಾರು ಜನಗಳಲಿ
ಸುಖಭೋಗಿ ನೀನು ಅಂತರಂಗದಲಿ
ದುಃಖವನು ಅರಿಯದೇ ಬಹಿರಂಗದಲಿ
ಹಾಡಲು ನಿನಗೇ ಬಾಯ್ ಬಂದಿತೇನು
ನುಡಿಯಲು ನಿನಗೇ ಒಂದು ಬಾರದು ಅಯ್ಯಾ
ಹಾಡಿ ಹೇಳಲು ಬಲ್ಲೆ ತಿಳಿದವರಿಗೇ ಚುಂಚಲಿ
ಸುದೈವಿ ನೀ ಮೌನಹಕ್ಕಿ ಜನ್ಮತಾಳಿ ಪಾಪ
ದುರ್ದೈವವನು ಹೊರಲಿಲ್ಲ ಮಾತಾಡಿ ನೀನು
*****








