ಮನದೊಳಗಣ ಮನೆಯ ಕಟ್ಟಿದೆ
ಹೇ ದೇವ ಹೇ ದೇವ ಎಂಥ ಚೆಂದವೋ||

ಪಂಚ ತತ್ವವೆಂಬ ಇಟ್ಟಿಗೆಯನಿಟ್ಟು
ಗೋಡೆಯ ಕಟ್ಟಿ ಭದ್ರ ಪಡಿಸಿದೆ
ನೂಲಿನೊಣಗಳ ಮುತ್ತುಗಳನಿರಿಸಿದೆ
ಸುತ್ತಿ ಒಂಭತ್ತು ಗೂಡುಗಳನಿರಿಸಿದೆ
ಉಸಿರಾಗಿ ಧಮನಿಗಳಲ್ಲಿ ಎಂಥ ಚೆಂದವೋ ||ಹೇ||

ಸತ್ಯಧರ್‍ಮವೆಂಬ ಜ್ಯೋತಿಯನ್ನಿರಿಸಿ
ಮೂರುದಿನ ಸುಖದುಃಖ ಎಂಬ ಶಾಸ್ತ್ರಕ್ಕೆ
ಜೋಗುಳ ಆಡಿಸುತಿಹೆ ಗೊಂಬೆಯನಿರಿಸಿ
ಭಾವಕೆ ಭಾವ ಬಾಳಿನಂದದ ರೂಪಕೆ
ನೀ ಸೂತ್ರಧಾರನೋ ಬಾಳಿಗೆ ಎಂಥ ಚೆಂದವೋ ||ಹೇ||
*****

Latest posts by ಹಂಸಾ ಆರ್‍ (see all)