ಬಣ್ಣದ ಬಯಲು

ಸಂಭ್ರಮದಲಿ ಬೆಳಕ್ಕಿ ಸಾಲು ರೆಕ್ಕೆ ಬಿಚ್ಚಿ ಬಾನು ತುಂಬ ಹಾರಾಡಿ ತಣಿ ತಣಿದು ಊರ ಹೊಲಗದ್ದೆಗಳ ಸ್ಪರ್ಶಿಸಿ ಬೆಟ್ಟದ ಮೇಲೆ ನೆರಳು ಹಾಯಿಸಿದವು. ಎಲ್ಲಾ ಜೀವಿಗಳ ನಿಟ್ಟುಸಿರು ಹೊತ್ತ ಮೋಡಗಳು ಮಳೆ ಬೀಜ ಬಿತ್ತಿವೆ...

ನನ್ನ ವೀಣೆಯು ಮಲಗಿದೆ!

ಹಗಲ ಹೊನ್ನಿನ ಕಿರಣರಾಸಿಯ ಬೆಳಕು ಕತ್ತಲ ಮಡಿಲಲಿ ಮಲಗಿ ನಿದ್ರಿಸೆ ಸಂಜೆರಾಗದ ಜೋಗುಳದ ಸವಿನುಡಿಯಲಿ, ಗಾಳಿ ತೂರಿದೆ ಮೇಘಮಾಲೆಯ ಮುಗಿಲ ಮಂಟಪ ಗೆಜ್ಜೆಗೆ ಮಾಲೆಯಾಗಿದೆ ನಿಶೆಯ ಒಲವಿನ ರವಿಯ ನೀರವ ಸೆಜ್ಜೆಗೆ! ಹೊನ್ನ ಹೊರಗನು...