
ನೊರೆನೊರೆಯಾದ ಮೋಡಗಳ ಕ್ಷೀರಸಾಗರ ಥೇಟ್ ಕ್ಯಾಲಂಡರಿನ ಚಿತ್ರದಂತೆಯೇ ದೇವದಾನವರ ಕಡಲಮಂಥನ ಪನ್ನಗಶಯನ ವಿಲಾಸಿ ವಿಷ್ಣು ಕಾಲೊತ್ತುವ ಆಭರಣ ಪ್ರಿಯೆ ಲಕ್ಷ್ಮಿ- ನೋಡಲು ಸುಸ್ತಾಗಿ ಕಲಾಕಾರನನು ಬೈಯ್ದು ಹಿಂದೊರಗಿ ನಿದ್ರಾವಶ. ವಿಷವುಂಡ ನೀಲಕಂಠನ ತೇಲುಗಣ...
ಬನ್ನಿ ಕನಸುಗಳೆ ಬನ್ನಿ ಬಾಳ ಬುತ್ತಿಗೆ ಭರವಸೆಯ ಹೊತ್ತು ತನ್ನಿ | ಮಣ್ಣಿನಲಿ ದಿನಕಟ್ಟೋ ಮಣ್ಣಣುಗರನು ಸಂತೈಸ ಬನ್ನಿ ಮಣ್ಣಲ್ಲಿ ಮಣ್ಣಾಗೋ ಎಚ್ಚರ ತೊರದವರೆಬ್ಬಿಸಿ ಕರೆದು ತನ್ನಿ | ದುಡಿ-ದುಡಿದು ದಣಿ-ದಣಿವ ತನುಮನವನೋಲೈಸಲು ಬನ್ನಿ ಸುಲಿ-ಸುಲಿದು ...













