ಜೀವನ ಸಮಸ್ಯೆ

ಮನದ ಕಾಂಕ್ಷೆ ಒಲವಿನೆಣಿಕೆ ಆಳ ಅಳೆದು ನೋಡಲಾರೆ, ವಿಶ್ವವ್ಯಾಪಿ ಎಮ್ಮ ಮುದವು ನಿಲ್ವುದೆಲ್ಲಿ ಎಣಿಸಲಾರೆ! ಕತ್ತಲಂತೆ ಸುತ್ತಲೆಲ್ಲ ಮನಕೆ ಭಾರ ದೇಹಸರ್ವ ತಿಂಬೆದೆಲ್ಲ ಅರುಚಿ ಕೇಳು, ಯಾರ ಇದುರು ಪೇಳ್ವುದಲ್ಲ!! ಮಂಜುಗಟ್ಟಿ ನೇತೃದ್ವಯವು ಬೆಂದಮನವ...